ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಹಣ ದುರುಪಯೋಗ ಮಾಡಿದ ಇಬ್ಬರು ಅಧಿಕಾರಿಗಳು ಅಮಾನತು - ಹಾಸನದಲ್ಲಿ ಹಣದುರುಪಯೋಗ ಇಬ್ಬರು ಅಧಿಕಾರಿಗಳ ಅಮಾನತು,

ಹಣ ದುರುಪಯೋಗ ಮಾಡಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಕಂಡು ಬಂದಿದೆ.

Two officers suspend, Two officers suspend for Money Laundering case, Two officers suspend in Hassan, Hassan news, ಇಬ್ಬರು ಅಧಿಕಾರಿಗಳ ಅಮಾನತು, ಹಣದುರುಪಯೋಗ ಇಬ್ಬರು ಅಧಿಕಾರಿಗಳ ಅಮಾನತು, ಹಾಸನದಲ್ಲಿ ಹಣದುರುಪಯೋಗ ಇಬ್ಬರು ಅಧಿಕಾರಿಗಳ ಅಮಾನತು, ಹಾಸನ ಸುದ್ದಿ,
ಲೆಕ್ಕ ಸಹಾಯಕ ಸೋಮಣ್ಣ

By

Published : Apr 18, 2021, 2:54 AM IST

Updated : Apr 18, 2021, 6:28 AM IST

ಹಾಸನ: ತೆರಿಗೆ ಹಣ ದುರುಪಯೋಗ ಮಾಡಿದ ಹಿನ್ನೆಲೆ ಇಬ್ಬರು ಅಧಿಕಾರಿಗಳು ಅಮಾನತುಗೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ಲೆಕ್ಕ ಸಹಾಯಕ ಸೋಮಣ್ಣ

ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮ ಪಂಚಾಯತ್​ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರೇಗೌಡ ಮತ್ತು ಲೆಕ್ಕ ಸಹಾಯಕ ಸೋಮಣ್ಣ ಅಮಾನತುಗೊಂಡ ಅಧಿಕಾರಿಗಳು.

2018 ರಿಂದ 2021 ರವರೆಗೆ ಸಂಗ್ರಹದ ತೆರಿಗೆ ಹಣವನ್ನು ಕಾರ್ಯದರ್ಶಿಯಾಗಿರುವ ಹಿರೇಗೌಡ 62 ಸಾವಿರ ರೂಪಾಯಿಗಳನ್ನು ಹಾಗೂ ಲೆಕ್ಕ ಸಹಾಯಕ ಸೋಮಣ್ಣ 1.14 ಲಕ್ಷ ಹಣವನ್ನು ಬ್ಯಾಂಕಿಗೆ ಜಮಾ ಮಾಡದೆ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದರು ಎನ್ನಲಾಗ್ತಿದೆ. ಈ ಕುರಿತು ಗ್ರಾಮ ಪಂಚಾಯತ್​ ಸದಸ್ಯರು ಹಾಗೂ ಗ್ರಾಮಸ್ಥರು ದೂರು ನೀಡಿದ್ದರು.

ಹಿರೇಗೌಡ

ನೀಡಿದ ದೂರಿನ ಅನ್ವಯ ಮೇಲ್ನೋಟಕ್ಕೆ ಹಣ ದುರುಪಯೋಗ ಆಗಿರುವುದು ಸಾಬೀತಾಗಿದೆ. ಹೀಗಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957 ನಿಯಮ 10/1 ಡಿ ಅಡಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಇಬ್ಬರನ್ನು ಜಿಲ್ಲಾ ಪಂಚಾಯತ್​ ಉಪಕಾರ್ಯದರ್ಶಿ ಸಿ. ಎಸ್. ಮಹೇಶ್ ಅಮಾನತು ಮಾಡಿ ಆದೇಶ ಹೊರಡಿಸಿದರು.

Last Updated : Apr 18, 2021, 6:28 AM IST

ABOUT THE AUTHOR

...view details