ಅರಕಲಗೂಡು :ಪಟ್ಟಣದ ವಿನಾಯಕ ನಗರದಲ್ಲಿ ಹತ್ತು ತಿಂಗಳ ಹಸುಗೂಸಿನಲ್ಲಿ ಸೇರಿ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗಾಗಿ ಅಧಿಕಾರಿಗಳು ಸಂಪೂರ್ಣ ಏರಿಯಾವನ್ನು ಸೀಲ್ಡೌನ್ ಮಾಡಿದ್ದಾರೆ.
10 ತಿಂಗಳ ಮಗು ಸೇರಿ ಓರ್ವ ವ್ಯಕ್ತಿಗೆ ಕೊರೊನಾ.. ಮನೆಬಾಗಿಲಿಗೆ ಬಂದ ಮಹಾಮಾರಿ - corona latest news
ಹಾಸನದ ಅರಕಲಗೂಡು ತಾಲೂಕಿನಲ್ಲಿ ಚಿಕ್ಕ ಮಗು ಸೇರಿದಂತೆ ಓರ್ವ ವ್ಯಕ್ತಿಗೆ ಕೊರೊನ ಸೋಂಕು ಧೃಡಪಟ್ಟಿದ್ದು, ಅಧಿಕಾರಿಗಳು ಸೋಂಕಿತರಿದ್ದ ಏರಿಯಾವನ್ನು ಸಂಪೂರ್ಣ ಸೀಲ್ಡೌನ್ ಮಾಡಿದ್ದಾರೆ.
ಹತ್ತು ತಿಂಗಳ ಮಗು ಸೇರಿ ಓರ್ವ ವ್ಯಕ್ತಿಗೆ ಕೊರೊನಾ
ತಾಲೂಕಿನ ಗೌರಿಕೊಪ್ಪಲು ಗ್ರಾಮದ ಐದು ಮಂದಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿತ್ತು. ವಿನಾಯಕ ನಗರದ ಸೋಂಕಿತರು ಸಹ ಅವರ ನಂಟಿರುವವರೇ ಎಂದು ಹೇಳಲಾಗುತ್ತಿದೆ. ಗೌರಿಕೊಪ್ಪಲಿನ ಚಾಲಕನಿಗೆ ಕೊರೊನಾ ಪಾಸಿಟಿವ್ ಮೊದಲು ಪತ್ತೆಯಾಗಿತ್ತು. ಬಳಿಕ ಆತನ ಇಬ್ಬರು ಮಕ್ಕಳು, ಹೆಂಡ್ತಿಗೆ ಕೊರೊನಾ ತಗುಲಿರುವುದು ಪತ್ತೆಯಾಗಿತ್ತು.
ಇವರೆಲ್ಲರನ್ನೂ ಹಾಸನದ ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲೋ ಇದೆ ಎನ್ನುತ್ತಿದ್ದ ಮಹಾಮಾರಿ ಮನೆಬಾಗಿಲಿಗೆ ಬಂದು ನಿಂತಿರುವುದು ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ.