ಹಾಸನ:ಅಪರಿಚಿತ ಮಹಿಳೆ ಮತ್ತು ಬಾಲಕನ ಮೃತದೇಹಗಳು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪತ್ತೆಯಾಗಿದ್ದು, ಸದ್ಯ ಮೃತರ ಸಂಬಂಧಿಕರಿಗಾಗಿ ತನಿಖೆ ಆರಂಭವಾಗಿದೆ.
ಚನ್ನರಾಯಪಟ್ಟಣದಲ್ಲಿ ಅಪರಿಚಿತ ಮಹಿಳೆ-ಮಗುವಿನ ಮೃತದೇಹ ಪತ್ತೆ - ಮೃತ ದೇಹಗಳು ಪತ್ತೆ
ಅಪರಿಚಿತ ಮಹಿಳೆ ಮತ್ತು ಬಾಲಕನ ಮೃತದೇಹಗಳು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪತ್ತೆಯಾಗಿದ್ದು, ಸದ್ಯ ಮೃತರ ಸಂಬಂಧಿಕರಿಗಾಗಿ ತನಿಖೆ ಆರಂಭವಾಗಿದೆ.
ಸರಿ ಸುಮಾರು 35ರಿಂದ 40ರ ವಯೋಮಾನದ ಮಹಿಳೆ ಹಾಗೂ 10ರಿಂದ 12 ವರ್ಷ ವಯಸ್ಸಿನ ಬಾಲಕನೋರ್ವನ ಶವ ಹೇಮಾವತಿ ನಾಲೆಯಲ್ಲಿ ಸಿಕ್ಕಿದ್ದು, ಮೃತದೇಹಗಳನ್ನು ನಾಲೆಯಿಂದ ಹೊರತೆಗೆದು ಸಂಬಂಧಪಟ್ಟವರಿಗಾಗಿ ಹುಡುಕಾಟ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಇನ್ನು ಮಹಿಳೆ ಮತ್ತು ಹಾಗೂ ಬಾಲಕನ ಶವವನ್ನು ಮೇಲ್ನೋಟಕ್ಕೆ ನೋಡಿದರೆ ಕೊಲೆ ಆಗಿರಬಹುದಾದ ಸಂಶಯ ವ್ಯಕ್ತವಾಗುತ್ತಿದ್ದು, ಪೊಲೀಸರ ತನಿಖೆ ಬಳಿಕವೇ ನಿಜಾಂಶ ಗೊತ್ತಾಗಬೇಕಿದೆ. ಸದ್ಯ ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಸಂಬಂಧಿಕರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.