ಕರ್ನಾಟಕ

karnataka

ETV Bharat / state

ಅರಕಲಗೂಡು: ಎರಡು ಬಟ್ಟೆ ಅಂಗಡಿ ಸೇರಿ ಮೊಬೈಲ್ ಅಂಗಡಿ ಸೀಲ್‌ಡೌನ್ - Arakalgodu corona cases

ಕೊರೊನಾ ಸೋಂಕಿತೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಕೊಣನೂರಿನಲ್ಲಿ ಎರಡು ಬಟ್ಟೆ ಅಂಗಡಿ ಮತ್ತು ಒಂದು ಮೊಬೈಲ್ ಅಂಗಡಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್‌ಡೌನ್ ಮಾಡಿದರು.

Seal down
Seal down

By

Published : Jun 25, 2020, 12:08 PM IST

ಅರಕಲಗೂಡು : ಕೊರೊನಾ ಸೋಂಕಿತೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಕೊಣನೂರಿನಲ್ಲಿ ಎರಡು ಬಟ್ಟೆ ಅಂಗಡಿ ಮತ್ತು ಒಂದು ಮೊಬೈಲ್ ಅಂಗಡಿಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್‌ಡೌನ್ ಮಾಡಿದರು.

ಕೊಡಗಿನ ಆಲೂರು ಸಿದ್ದಾಪುರದಲ್ಲಿ ಓರ್ವರಿಗೆ ಕೋವಿಡ್ ಪತ್ತೆಯಾಗಿತ್ತು. ಅವರು ಜೂನ್ 18 ನೇ ತಾರೀಖಿನಂದು ಎರಡು ಬಾರಿ ಕೊಣನೂರು ಪಟ್ಟಣದಲ್ಲಿ ಸಂಚರಿಸಿದ್ದಾರೆ. ಪಟ್ಟಣದ ಬಟ್ಟೆ ಅಂಗಡಿ ಮತ್ತು ಮೊಬೈಲ್ ಶಾಪ್‌ಗೂ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಎರಡೂ ಅಂಗಡಿಗಳನ್ನು ಹಾಗೂ ಬಟ್ಟೆ ಅಂಗಡಿಯವರ ಮನೆಯಲ್ಲಿ ಬಾಡಿಗೆಗಿದ್ದ ದಿನಸಿ ಅಂಗಡಿಯನ್ನು ಸಹ ಸೀಲ್‌ಡೌನ್ ಮಾಡಲಾಗಿದೆ.

ಈ ಕುರಿತು ಆರೋಗ್ಯ ನಿರೀಕ್ಷಕ ಎಂ.ಆರ್. ಆನಂದ ಗೌಡ ಮಾತನಾಡಿ, ಸೋಂಕಿತೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಒಟ್ಟು 14 ಜನರನ್ನು ಕೋವಿಡ್ ಟೆಸ್ಟ್ ಮಾಡಿಸಲು ಅರಕಲಗೂಡು ಪಟ್ಟಣದ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವೈದ್ಯಾಧಿಕಾರಿಗಳು ಸೋಂಕಿತೆಯ ಜೊತೆ ಇನ್ನೆಷ್ಟು ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.

ವೈದ್ಯಾಧಿಕಾರಿಗಳಾದ ಡಾ.ದರ್ಶನ್, ಡಾ.ಚಿದಾನಂದ್, ಆರೋಗ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

ABOUT THE AUTHOR

...view details