ಹಾಸನ :ನಗರದಲ್ಲಿ ಸೆ.7ರಂದು ನಡೆದಿದ್ದ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳವು (2 crore value gold theft) ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 45 ಲಕ್ಷ ರೂ. ಬೆಲೆಯ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಹಳೇಬೀಡು ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ರಘು (Granite businessman Raghu) ಎಂಬುವರ ಮನೆಯಲ್ಲಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಮಹಮದ್ ಖಾಲಿದ್ (Mohammed Khalid) ಹಾಗೂ ಮತ್ತೊಬ್ಬ ಆರೋಪಿ ಸೈಯದ್ (Syed) ನನ್ನು ಬಂಧಿಸಲಾಗಿತ್ತು.
ಈ ಬಗ್ಗೆ ಎಸ್ಪಿ ಶ್ರೀನಿವಾಸಗೌಡ ಅವರು ಮಾತನಾಡಿದ್ದು, 'ಹಳೇಬೀಡು ಠಾಣೆ ವೃತ್ತ ನಿರೀಕ್ಷಕ ಶ್ರೀಕಾಂತ್ ಅವರು ಮಾಯಗೊಂಡನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ನ.12 ರಂದು ಬೆಳಗ್ಗೆ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಜಾವ್‌ಗಲ್ ಕಡೆಯಿಂದ ಬಂದ ಕೇರಳ ಮೂಲದ ನೋಂದಣಿ ಇದ್ದ ಎರಡು ಕಾರನ್ನು ತಡೆದು ದಾಖಲೆ ತೋರಿಸುವಂತೆ ತಿಳಿಸಿದ್ದಾರೆ.
ಆಗ ಅನುಮಾನಾಸ್ಪದವಾಗಿ ವರ್ತಿಸಿದ ಕಡೂರು ಹಾಗೂ ಮಂಗಳೂರು ಮೂಲದ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ವಶಪಡಿಸಿಕೊಂಡ ಕಾರನ್ನು ಪರಿಶೀಲಿಸಿದಾಗ ಕಪ್ಪುಬಣ್ಣದ ಪರ್ಸ್‌ನಲ್ಲಿ ಚಿನ್ನದಗಟ್ಟಿ, ಮೂರು ಚಿನ್ನದ ಚೈನ್, ಮತ್ತೊಂದು ಕಾರಿನಲ್ಲಿ 500 ಬೆಲೆಯ ಎರಡು ಕಂತೆ ನೋಟ್ ಪತ್ತೆಯಾಗಿದೆ' ಎಂದರು.