ಕರ್ನಾಟಕ

karnataka

ETV Bharat / state

ಬೈಕ್​ ಸವಾರನ ಅಡ್ಡಗಟ್ಟಿ ದರೋಡೆಗೆ ಯತ್ನ... ಕುರಿಗಾಯಿಗಳಿಂದ ಖದೀಮರಿಗೆ ಹಿಗ್ಗಾಮುಗ್ಗಾ ಥಳಿತ - robbery, etv bharat, holenarasipura, kannada news, crime news, two wheeler, bike, rider,

ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ ಹಣ ಮತ್ತು ಚಿನ್ನಾಭರಣ ದೋಚಲು ಪ್ರಯತ್ನಿಸಿದವರಿಗೆ ಕುರಿಗಾಹಿಗಳು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹೊಳೆನರಸಿಪುರ ಬಳಿ ನಡೆದಿದೆ.

ದುಷ್ಕರ್ಮಿಗಳು

By

Published : Apr 22, 2019, 9:40 AM IST

ಹಾಸನ:ದ್ವಿಚಕ್ರ ವಾಹನ ಸವಾರನನ್ನ ಅಡ್ಡಗಟ್ಟಿ ಹಣ ಮತ್ತು ಚಿನ್ನಾಭರಣ ದೋಚಲು ಪ್ರಯತ್ನಿಸಿದವರನ್ನು ಕುರಿಗಾಹಿಗಳು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹೊಳೆನರಸಿಪುರ ತಾಲೂಕಿನ ದೊಡ್ಡ ಕಾಡನೂರು ಬಳಿ ನಡೆದಿದೆ.

ಹೊಳೆನರಸಿಪುರದ ವಿಷಕಂಠಯ್ಯ ಎಂಬುವರನ್ನು ಅಡ್ಡಗಟ್ಟಿ ಚಿನ್ನ ಹಾಗೂ ಹಣವನ್ನು ದೋಚಲು ಈ ಖದೀಮರು ಪ್ರಯತ್ನಿಸಿದ್ದರು. ಆದರೆ ವಿಷಕಂಠಯ್ಯ ಮೊದಲು ಪ್ರತಿರೋಧ ಒಡ್ಡಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ವಾಹನವನ್ನು ಕಂಡ ಚಾಲಾಕಿಗಳು ಅವರನ್ನು ಸಮೀಪದ ಕುರುಚಲು ಗಿಡದ ಬಳಿ ಎಳೆದೊಯ್ದಿದ್ದರು. ವಿಷಕಂಠಯ್ಯ 3 ಮಂದಿಯಿಂದ ಹಲ್ಲೆಗೊಳಗಾದ್ದರಿಂದ ಜೋರಾಗಿ ಕಿರುಚಾಡಿದ್ದರು.

ದರೋಡೆಗೆ ಪ್ರಯತ್ನ ಪಟ್ಟ ದುಷ್ಕರ್ಮಿಗಳು

ಕಿರುಚಾಟದ ಶಬ್ದ ಕೇಳಿದ ಸಮೀಪದಲ್ಲಿದ್ದ ಕುರಿಗಾಯಿಗಳು ಸ್ಥಳಕ್ಕೆ ಬಂದು ಮೂವರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ತಕ್ಕ ಶಾಸ್ತಿ ಮಾಡಿದ್ದಾರೆ. ನಂತರ ಹೊಳೆನರಸಿಪುರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಬ್ಬೂರು ಕೊಪ್ಪಲು ಗ್ರಾಮದ ಸಿದ್ದರಾಜು (41), ಅರುಣ್ ರಾಜ್ ಅರಸ್ (35) ಮತ್ತು ರಘು (33) ಆರೋಪಿಗಳು ಎಂದು ತಿಳಿದುಬಂದಿದೆ. ಸದ್ಯ ಈ ಮೂವರು ಹೊಳೆನರಸಿಪುರ ಪೊಲೀಸರ ವಶದಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

...view details