ಹಾಸನ: ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನೆರೆ ಹಾವಳಿ, ಬೆಂಕಿ ಅವಘಡ ಸೇರಿದಂತೆ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಸಾವಿರಾರು ಜನರನ್ನು ರಕ್ಷಿಸಿರುವ ಕರ್ನಾಟಕದ ಸಿವಿಲ್ ಡಿಫೆನ್ಸ್ ಕಮಾಂಡರ್ ಡಾ. ಪಿ. ಆರ್. ಎಸ್. ಚೇತನ್ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಚೇತನ್, ತಾವು ಸುಮಾರು 2 ದಶಕಗಳಿಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೊಡಗು, ಉತ್ತರ ಕರ್ನಾಟಕ, ಮಂಗಳೂರು, ಚೆನ್ನೈ ಸೇರಿದಂತೆ ಇನ್ನಿತರ ಹೊರ ರಾಜ್ಯಗಳಲ್ಲಿಯೂ ಕೂಡ ತುರ್ತು ಸಂದರ್ಭದಲ್ಲಿ ನಮ್ಮ ಬೆಟಾಲಿಯನ್ ವತಿಯಿಂದ ಸಾವಿರಾರು ಜನರು, ಜಾನುವಾರುಗಳನ್ನು ರಕ್ಷಣೆ ಮಾಡಿದ್ದೇವೆ ಎಂದರು.