ಕರ್ನಾಟಕ

karnataka

ETV Bharat / state

ಹಾಸನದಿಂದ ಮಂಗಳೂರಿಗೆ ವರ್ಗಾವಣೆ: ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರ - ಹಾಸನದಿಂದ ಮಂಗಳೂರಿಗೆ ವರ್ಗಾವಣೆ'

ಮುಷ್ಕರ ನಿರತ ಸಾರಿಗೆ ನೌಕರನನ್ನು ಏಕಾಏಕಿ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

Transport employee attempted suicide
ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರ

By

Published : Apr 12, 2021, 2:52 PM IST

ಹಾಸನ:ಮುಷ್ಕರ ನಿರತ ಸಾರಿಗೆ ನೌಕರನನ್ನು ಏಕಾಏಕಿ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರ

ಪಾಲಾಕ್ಷ (45) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರ. ಹಾಸನ ನಗರದ ಒಂದನೇ ಡಿಪೋದಲ್ಲಿ ಚಾಲಕ ಮತ್ತು ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಕಳೆದ ಆರು ತಿಂಗಳಿಂದ ಮುಷ್ಕರದಲ್ಲಿ ಪಾಲ್ಗೊಂಡು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ನೊಂದ ಪಾಲಾಕ್ಷ ಇಂದು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ನನ್ನ ಈ ಪರಿಸ್ಥಿತಿಗೆ ಕೆಎಸ್ಆರ್​ಟಿಸಿ ರಾಜ್ಯ ಅಧ್ಯಕ್ಷ ಅನಂತಸುಬ್ಬರಾವ್ ಹಾಗೂ ಸ್ಥಳೀಯ ಕೆಎಸ್ಆರ್​ಟಿಸಿ ನಾಯಕರುಗಳಾದ ರಂಗೇಗೌಡ, ಶಶಿಧರ್ ಹಾಗೂ ಧರ್ಮ ಅವರೇ ಕಾರಣ ಎಂದು ನೌಕರ ಆರೋಪಿಸಿದ್ದಾನೆ.

ಓದಿ:ಸಾರಿಗೆ ನೌಕರರು ಗೌರಯುತವಾಗಿ ಸೇವೆಗೆ ಹಾಜರಾಗಬೇಕು: ಸಿಎಂ ಬಿಎಸ್​ವೈ

ABOUT THE AUTHOR

...view details