ಹಾಸನ : ಅರಕಲಗೂಡು ಪ. ಪಂ. ಕಿರಿಯ ಇಂಜಿನಿಯರ್ ಕೆ.ಆರ್. ಕವಿತಾ ಅವರ ವರ್ಗಾವಣೆ ಸಂಬಂಧ ಪರ ಮತ್ತು ವಿರೋಧ ವ್ಯಕ್ತಪಡಿಸಿರುವ ಎರಡು ಗುಂಪುಗಳು ಮಂಗಳವಾರದಂದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿವೆ.
ಪ.ಪಂ.ಕಿರಿಯ ಇಂಜಿನಿಯರ್ ವರ್ಗಾವಣೆ;ಎರಡು ಗುಂಪುಗಳ ಪ್ರತ್ಯೇಕ ಪ್ರತಿಭಟನೆ - ಸಿಪಿಐ ದೀಪಕ್
ಪಟ್ಟಣ ಪಂಚಾಯ್ತಿ ಕಿರಿಯ ಇಂಜಿನಿಯರ್ ಕೆ.ಆರ್. ಕವಿತಾ ವರ್ಗಾವಣೆ ಸಂಬಂಧ ಪರ ಮತ್ತು ವಿರೋಧ ವ್ಯಕ್ತಪಡಿಸಿರುವ ಎರಡು ಗುಂಪುಗಳು ಮಂಗಳವಾರದಂದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ತಹಸೀಲ್ದಾರ್ ಶಿವರಾಜ್ ಅವರಿಗೆ ಮನವಿ ಸಲ್ಲಿಕೆ
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಗುಂಪುಗಳ ಪ್ರತಿಭಟನಾಕಾರರು ಮಿನಿ ವಿಧಾನಸೌಧದತ್ತ ಸಾಗಿದರು. ಈ ವೇಳೆ ಕವಿತಾ ಪರ ಘೋಷಣೆ ಮೊಳಗಿಸಿದ ಅವರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿದ್ದವರನ್ನು ಪಟ್ಟಭದ್ರ ಹಿತಾಸಕ್ತಿಗಳು ಬೇರೆಡೆ ವರ್ಗಾವಣೆ ಮಾಡಲು ಕುತಂತ್ರ ನಡೆಸಿವೆ ಎಂದು ಆರೋಪಿಸಿದ್ರು.
ಇಂಜಿನಿಯರ್ ಅವರಿಂದಲೇ ಅನುಕೂಲ ಪಡೆದ ಕೆಲವರು ರಾಜಕೀಯ ಕುಮ್ಮಕ್ಕು ನೀಡಿ ಅವರ ವರ್ಗಾವಣೆಗೆ ಕೈ ಹಾಕಿದ್ದು ನಾಚಿಗೇಡಿನ ಸಂಗತಿ. ಪಟ್ಟಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕವಿತಾರ ವರ್ಗಾವಣೆಯನ್ನು ಸರ್ಕಾರ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.