ಹಾಸನ:ಗದ್ದೆ ಉಳುಮೆ ಮಾಡಲು ಹೋಗಿದ್ದ ಟ್ರ್ಯಾಕ್ಟರ್ ಕೆಸರಿನಲ್ಲಿ ಹೂತು ಹೋಗಿತ್ತು. ಮತ್ತೊಂದು ಟ್ರ್ಯಾಕ್ಟರ್ನ ಸಹಾಯದಿಂದ ಹೂತು ಹೋಗಿದ್ದ ಟ್ರ್ಯಾಕ್ಟರ್ ಮೇಲೆತ್ತುವ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸ್ಥಳದಲ್ಲಿಯೇ ಸಾವು - undefined
ಹೂತು ಹೋಗಿದ್ದ ಟ್ರ್ಯಾಕ್ಟರ್ವೊಂದನ್ನು ಮೇಲಕ್ಕೆತ್ತಲು ಹೋಗಿದ್ದ ಮತ್ತೊಂದು ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ಟ್ರ್ಯಾಕ್ಟರ್ ಪಲ್ಟಿ
ತಾಲೂಕಿನ ತೋರನಹಳ್ಳಿ ಗ್ರಾಮದ ಶ್ರೀಕಾಂತ್ (22) ಸಾವನ್ನಪ್ಪಿದ ಟ್ರ್ಯಾಕ್ಟರ್ ಚಾಲಕ.ಇನ್ನು ಘಟನಾ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.