ಕರ್ನಾಟಕ

karnataka

ETV Bharat / state

ಹಾಸನದಲ್ಲಿ 151 ಜನ ಗುಣಮುಖ: 61 ಜನರಿಗೆ ಕೊರೊನಾ ಚಿಕಿತ್ಸೆ - ಹಾಸನ ಕೊರೊನಾ ಬಿಡುಗಡೆ,

ಹಾಸನದಲ್ಲಿ ಇಲ್ಲಿಯವರೆಗೆ 151 ಜನರು ಕೊರೊನಾದಿಂದ ಗುಣಮುಖರಾಗಿದ್ದು, ಇನ್ನೂ 61 ಜನ ಕೋವಿಡ್​-19 ಚಿಕಿತ್ಸೆ ಪಡೆಯುತ್ತಿದ್ದಾರೆ.

Corona update, Hassan corona date, Hassan corona discharge, Hassan corona discharge news, ಕೊರೊನಾ ಅಪ್​ಡೇಟ್​, ಹಾಸನ ಕೊರೊನಾ ಅಪ್​ಡೇಟ್​, ಹಾಸನ ಕೊರೊನಾ ಬಿಡುಗಡೆ, ಹಾಸನ ಕೊರೊನಾ ಬಿಡುಗಡೆ ಸುದ್ದಿ,
ಸಂಗ್ರಹ ಚಿತ್ರ

By

Published : Jun 10, 2020, 12:47 PM IST

ಹಾಸನ: ಜಿಲ್ಲೆಯಲ್ಲಿ ಈವರೆಗೆ ಒಟ್ಟು 212 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 151 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಪ್ರಸ್ತುತ 61 ಸಕ್ರಿಯ ಕೋವಿಡ್-19 ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ.

ಹಾಸನದಲ್ಲಿ ಒಟ್ಟು 151 ಜನ ಗುಣಮುಖ

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಸೋಂಕನ್ನು ಅಂತಾರಾಷ್ಟ್ರೀಯ ಸಾರ್ವಜನಿಕ ತುರ್ತು ಆರೋಗ್ಯ ಕಾಳಜಿ ಎಂದು ಘೋಷಿಸಿದೆ. ಈ ಸೋಂಕು ಭಾರತವೂ ಸೇರಿದಂತೆ ವಿಶ್ವದ 216 ದೇಶಗಳನ್ನು ಬಾಧಿಸಿದೆ. ಈ ಸಂಬಂಧ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಲ್ಲಾ ರೀತಿಯ ಕಣ್ಗಾವಲು ಇಟ್ಟು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲೆಯ ತಾಲೂಕುವಾರು ಕೋವಿಡ್ ಪ್ರಕರಣಗಳನ್ನು ನೋಡುವುದಾದರೆ ಆಲೂರು ತಾಲೂಕಿನಲ್ಲಿ 15, ಅರಕಲಗೂಡು 3, ಅರಸೀಕೆರೆ 3, ಚನ್ನರಾಯಪಟ್ಟಣ 151, ಹಾಸನ 15 ಹಾಗೂ ಹೊಳೆನರಸೀಪುರದಲ್ಲಿ 25 ಪ್ರಕರಣಗಳು ಈವರೆಗೆ ವರದಿಯಾಗಿವೆ.

ABOUT THE AUTHOR

...view details