ಕರ್ನಾಟಕ

karnataka

ETV Bharat / state

ಬೆಂಗಳೂರು - ಹಾಸನ ಹೆದ್ದಾರಿ ಟೋಲ್ ಶುಲ್ಕ ಏರಿಕೆ ! - ಹೊಸ ಟೋಲ್​ ಶುಲ್ಕ

ಬೆಂಗಳೂರು- ಹಾಸನ ಹೆದ್ದಾರಿ ಮಾರ್ಗದ ಟೋಲ್​ಗಳಲ್ಲಿ ಶುಲ್ಕ ಹೆಚ್ಚಳ ಮಾಡಲು ಎನ್ಎಚ್ಎಐ ಅನುಮತಿ ನೀಡಿದ್ದು, ಪರಿಷ್ಕೃತ ಶುಲ್ಕ ಸೆ.1 ರಿಂದ ಜಾರಿಗೆ ಬರಲಿದೆ.

toll fee increased by  NHIA
ಬೆಂಗಳೂರು-ಹಾಸನ ಹೆದ್ದಾರಿ ಟೋಲ್ ಶುಲ್ಕ ಏರಿಕೆ

By

Published : Aug 24, 2020, 11:39 PM IST

ಹಾಸನ:ಬೆಂಗಳೂರು- ಹಾಸನ ನಡುವಿನ ಹೆದ್ದಾರಿಯ ಟೋಲ್ ಶುಲ್ಕ ಹೆಚ್ಚಳ ಮಾಡಲು ಎನ್ಎಚ್ಎಐ (ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ) ಅನುಮತಿ ನೀಡಿದ್ದು, ಸೆ.1 ರಿಂದ ಹೊಸ ಶುಲ್ಕ ಜಾರಿಗೆ ಬರಲಿದೆ. ಈ ಮಾರ್ಗದಲ್ಲಿ ಒಟ್ಟು 4 ಟೋಲ್​ಗಳಿದ್ದು, ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಹಾಸನ ನಡುವೆ ಸಂಪರ್ಕ ಕಲ್ಪಿಸುತ್ತದೆ.

ಕಾರುಗಳಲ್ಲಿ ಎರಡು ಕಡೆ ಸಂಚಾರ ಮಾಡುವವರು 5 ರೂ. ಶುಲ್ಕವನ್ನು ಹೆಚ್ಚಿಗೆ ಪಾವತಿ ಮಾಡಬೇಕು. ಮಾಸಿಕ ಪಾಸುಗಳ ದರಗಳನ್ನು 20 ರೂ. ಹೆಚ್ಚಳ ಮಾಡಲಾಗಿದೆ. ಎಲ್ಸಿವಿ ವಾಹನಗಳ ಮಾಸಿಕ ಪಾಸಿನ ದರವನ್ನು 40 ರೂ. ಏರಿಕೆ ಮಾಡಲಾಗಿದೆ. ಬಸ್, ಲಾರಿ 5 ರೂ. ಶುಲ್ಕ ಹೆಚ್ಚುವರಿಯಾಗಿ ನೀಡಬೇಕಿದೆ. ಮಾಸಿಕ ಪಾಸುಗಳ ದರ 4725 ರಿಂದ 4800ಕ್ಕೆ ಏರಿಕೆಯಾಗಿದೆ. ಕಾರುಗಳ ಏಕಮುಖ ಸಂಚಾರಕ್ಕೆ ಇದ್ದ ದರ ಹೆಚ್ಚಳ ಮಾಡಿಲ್ಲ. ಕೋವಿಡ್-19 ಪರಿಸ್ಥಿತಿ ಹಿನ್ನೆಲೆ ಕೆಲವು ವಾಹನಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿಲ್ಲ.

ಇನ್ನು ವಾರಾಂತ್ಯದಲ್ಲಿ 10 ಲಕ್ಷ ಸಂಗ್ರಹವಾಗುತ್ತಿತ್ತು. ವಾಹನ ಮತ್ತು ಜನರ ಸಂಚಾರ ಕಡಿಮೆಯಾಗಿರುವುದರಿಂದ ಸಂಗ್ರಹವಾಗುತ್ತಿದ್ದ ಹಣದಲ್ಲಿ ಅರ್ಧಭಾಗವೂ ಸಂಗ್ರಹವಾಗುತ್ತಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರ ಮಾತು.

ABOUT THE AUTHOR

...view details