ಕರ್ನಾಟಕ

karnataka

ETV Bharat / state

ಹಾಸನದಲ್ಲಿ ತಂಬಾಕು ನಿಯಂತ್ರಣ ಜಾಗೃತಿ ಅಭಿಯಾನ - Tobacco Control Awareness Campaign in Hassan

ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಜಾಗೃತಿ ಮೂಡಿಸುವ ಗುಲಾಬಿ ಆಂದೋಲನಕ್ಕೆ ನ್ಯಾಯಾಧೀಶ ಬಸವರಾಜು, ಸಿಇಒ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ, ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಚಾಲನೆ ನೀಡಿದರು.

Tobacco Control Awareness Campaign in Hassan
ತಂಬಾಕು ನಿಯಂತ್ರಣ ಜಾಗೃತಿ ಅಭಿಯಾನ

By

Published : Jan 3, 2020, 11:26 PM IST

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಜಾಗೃತಿ ಮೂಡಿಸುವ ಗುಲಾಬಿ ಆಂದೋಲನಕ್ಕೆ ನ್ಯಾಯಾಧೀಶ ಬಸವರಾಜು, ಸಿಇಒ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ, ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಸಿಇಒ ಪರಮೇಶ್​, ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಭಾರತ ಸರ್ಕಾರವು 2003 ರಲ್ಲಿ ಕಾಯ್ದೆಯನ್ನು ಜಾರಿಗೆ ತಂದಿದೆ. 33 ಪ್ರಮುಖ ಸೆಕ್ಷನ್‌ಗಳಿವೆ ಎಂದರು.

ತಂಬಾಕು ನಿಯಂತ್ರಣ ಜಾಗೃತಿ ಅಭಿಯಾನ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧ, ಉಲ್ಲಂಘನೆಗೆ 200 ರೂ.ಗಳನ್ನು ಸ್ಥಳದಲ್ಲಿಯೇ ಅಧಿಕಾರಿಗಳು ದಂಡ ವಿಧಿಸಬಹುದು. ಶಿಕ್ಷಣ ಸಂಸ್ಥೆಯ 100 ಅಡಿ ಅಂತರದಲ್ಲಿ ಸಿಗರೇಟ್ ಇತರ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದನ್ನು ನಿಷೇಧಿಸಿದೆ. 18 ವರ್ಷದ ಒಳಗಿನ ವ್ಯಕ್ತಿಗೆ ತಂಬಾಕನ್ನು ಮಾರಾಟ ಮಾಡುವಂತಿಲ್ಲ. ಮೊದಲ ಉಲ್ಲಂಘನೆಗೆ 2 ವರ್ಷ ಜೈಲು ಶಿಕ್ಷೆ ಜೊತೆಗೆ 5 ಸಾವಿರ ದಂಡ ವಿಧಿಸಲಾಗುತ್ತದೆ. ಎರಡನೆಯ ಉಲ್ಲಂಘನೆಗೆ 5 ವರ್ಷ ಜೈಲು ಶಿಕ್ಷೆ 10 ಸಾವಿರ ರೂ. ದಂಡ ವಿಧಿಸುವುದಾಗಿ ತಿಳಿಸಿದರು.

ತಂಬಾಕು ನಿಯಂತ್ರಣಕ್ಕಾಗಿ ಜಾಗೃತಿ ಮೂಡಿಸುವ ಜಾಥಾದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ದಾರಿಯಲ್ಲಿ ತಂಬಾಕು ಸೇವನೆ ಮಾಡುವವರ ಬಳಿ ಹೋಗಿ ಗುಲಾಬಿ ನೀಡಿ ಅವರಿಗೆ ಮನವರಿಕೆ ಮಾಡುವ ಕಾರ್ಯಕ್ರಮ ನಡೆಸಿದರು.

ABOUT THE AUTHOR

...view details