ಕರ್ನಾಟಕ

karnataka

ETV Bharat / state

ಮೋಜಿಗಾಗಿ ಸೇತುವೆಯಿಂದ ಹೇಮಾವತಿಗೆ ಹಾರಿದ ಮೂವರು ಯುವಕರ ಶವ ಪತ್ತೆ - ಸಂಸದ ಪ್ರಜ್ವಲ್ ರೇವಣ್ಣ

ಎರಡು ದಿನಗಳ ಹಿಂದೆ ಹೇಮಾವತಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರು ಯುವಕರ ಮೃತದೇಹಗಳನ್ನು ಗುರುವಾರ ಸಂಜೆ ವೇಳೆಗೆ ಮುಳುಗು ತಜ್ಞರು ನದಿಯಿಂದ ಹೊರತೆಗೆದಿದ್ದಾರೆ.

ಮೋಜಿಗಾಗಿ ಸೇತುವೆಯಿಂದ ಹೇಮಾವತಿಗೆ ಹಾರಿದ ಮೂವರು ಯುವಕರ ಶವ ಪತ್ತೆ

By

Published : Oct 11, 2019, 5:14 AM IST

ಹಾಸನ:ಜಿಲ್ಲೆಯ ಆಲೂರು ತಾಲೂಕಿನ ಹುಣಸವಳ್ಳಿ ಗ್ರಾಮದಲ್ಲಿ ಮಂಗಳವಾರ ಸೇತುವೆ ಮೇಲಿನಿಂದ ಜಂಪ್ ಮಾಡಿ ಹೇಮಾವತಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರು ಯುವಕರ ಶವ ಕೊನೆಗೂ ಸಿಕ್ಕಿದೆ.

ಮೋಜಿಗಾಗಿ ಸೇತುವೆಯಿಂದ ಹೇಮಾವತಿಗೆ ಹಾರಿದ ಮೂವರು ಯುವಕರ ಶವ ಪತ್ತೆ

ಹಬ್ಬದ ನಿಮಿತ್ತ ಸ್ನಾನಕ್ಕೆ ಎಂದು ನದಿಯ ಬಳಿ ಹೋಗಿದ್ದ ಮೂವರು ಗೆಳೆಯರು ನಂತರ ಮೋಜಿಗಾಗಿ ಸೇತುವೆ ಮೇಲಿನಿಂದ ಹಾರಿದ್ದಾರೆ. ಮೊದಲು ರತನ್ ಎಂಬಾತ ಜಂಪ್ ಮಾಡಿದ್ದು, ನಂತರ ಆತನನ್ನು ಹಿಂಬಾಲಿಸಿ ಭೀಮರಾಜ್ ಮತ್ತು ಮನು ಹೋಗಿದ್ದಾರೆ. ಈ ವೇಳೆ ನದಿಯ ನೀರು ರಭಸದಿಂದ ಹರಿಯುತ್ತಿರುವ ಕಾರಣ, ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಕೊಚ್ಚಿ ಹೋಗಿ ಹೋಗಿದ್ದರು.

ಆಂಧ್ರಪ್ರದೇಶ ರಾಜ್ಯದ ವಿಜಯವಾಡದಿಂದ ಆಗಮಿಸಿದ ಎನ್.ಡಿ.ಆರ್.ಎಫ್. ತಂಡದ 21 ಜನ ಮತ್ತು ಅಗ್ನಿಶಾಮಕ ದಳದ 12 ಜನರ ತಂಡ, ಯುವಕರ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದರು. ಘಟನೆ ನಡೆದ ಎರಡು ದಿನದ ಬಳಿಕ ನದಿ ಪಾತ್ರದ ಸುಮಾರು 400 ಮೀ. ದೂರದಲ್ಲಿ ರತನ್ ಮತ್ತು ಹಾಲುವಾಗಿಲು ಒಡ್ಡಿನ ಬಳಿ ಭೀಮರಾಜ್ ಮತ್ತು ಮನು ಮೃತದೇಹವನ್ನು ಹೊರ ತೆಗೆಯಲಾಯಿತು. ಮೂವರ ಮೃತದೇಹಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಮೃತ ಯುವಕರ ಕುಟುಂಬಗಳ ರೋಧನೆ ಮುಗಿಲು ಮುಟ್ಟಿತ್ತು. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೂ ಮೊದಲು ಬುಧವಾರ ರಾತ್ರಿ ಮತ್ತು ಇಂದು ಸ್ಥಳಕ್ಕೆ ಸಂಸದ ಪ್ರಜ್ವಲ್ ರೇವಣ್ಣರವರು ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ, ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು. ತಹಸೀಲ್ದಾರ್ ಶಿರಿನ್​ ತಾಜ್ ರವರು ಮುಂಜಾನೆ 6 ರಿಂದ ಘಟನೆ ನಡೆದ ಸ್ಥಳದಲ್ಲೆ ಮೊಕ್ಕಾಂ ಹೂಡಿ ಮುಳುಗು ತಜ್ಞರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು.

ABOUT THE AUTHOR

...view details