ಸಕಲೇಶಪುರ: ಆಕಸ್ಮಿಕವಾಗಿ ಮಣ್ಣು ಕುಸಿದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡ ಘಟನೆ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ.
ಸಕಲೇಶಪುರದಲ್ಲಿ ಮನೆ ಕಾಮಗಾರಿ ವೇಳೆ ಮಣ್ಣು ಕುಸಿತ...ಮೂವರು ಕಾರ್ಮಿಕರ ರಕ್ಷಣೆ... - ಪಟ್ಟಣದ ಕುಶಾಲನಗರ ಬಡಾವಣೆ
ಮನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿದ ಪರಿಣಾಮ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
![ಸಕಲೇಶಪುರದಲ್ಲಿ ಮನೆ ಕಾಮಗಾರಿ ವೇಳೆ ಮಣ್ಣು ಕುಸಿತ...ಮೂವರು ಕಾರ್ಮಿಕರ ರಕ್ಷಣೆ... Three workers caught in the mud ,protection from the locals in sakaleshpura](https://etvbharatimages.akamaized.net/etvbharat/prod-images/768-512-6764563-867-6764563-1586693922174.jpg)
ಮಣ್ಣಿನಲ್ಲಿ ಸಿಲುಕಿದ ಮೂವರು ಕಾರ್ಮಿಕರು
ತಾಲೂಕಿನ ಗುಲಗಳಲೆ ಹಾಗೂ ಸುತ್ತಮುತ್ತಲಿನ ಗ್ರಾಮದ ಕಾರ್ತೀಕ್, ಶಿವಕುಮಾರ್, ಈಶ್ವರ್ ಗಾಯಗೊಂಡ ಕಾರ್ಮಿಕರು.
ಮಣ್ಣಿನಲ್ಲಿ ಸಿಲುಕಿದ ಮೂವರು ಕಾರ್ಮಿಕರು
ಮನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಹಿಂಭಾಗವಿದ್ದ ಗೆರೆ(ಗೋಡೆ) ಕುಸಿದ ಪರಿಣಾಮ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು,ತಕ್ಷಣ ನೆರವಿಗೆ ಬಂದ ಸ್ಥಳೀಯರು ಕಾರ್ಮಿಕರನ್ನು ರಕ್ಷಿಸಿ ಸಮೀಪದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸ್ಥಳೀಯರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.