ಕರ್ನಾಟಕ

karnataka

ETV Bharat / state

ಇ-ಲೋಕ್ ಅದಾಲತ್​ನಲ್ಲಿ ಸಾವಿರಾರು ಪ್ರಕರಣ ಇತ್ಯರ್ಥವಾಗಲಿವೆ; ನ್ಯಾ. ಅರವಿಂದ ಕುಮಾರ್ - E-Lok Adalat

ಸೆ.19 ರಂದು ನಡೆಯಲಿರುವ ಇ-ಲೋಕ್ ಅದಾಲತ್​ನಲ್ಲಿ ರಾಜೀ ತೀರ್ಮಾನದ ಮೂಲಕ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ ಕುಮಾರ್ ಹೇಳಿದ್ದಾರೆ.

ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ ಕುಮಾರ್
ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ ಕುಮಾರ್

By

Published : Aug 29, 2020, 12:16 AM IST

ಹಾಸನ:ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಸೆ.19 ರಂದು ಇ-ಲೋಕ್ ಅದಾಲತ್ ಏರ್ಪಡಿಸಲಾಗಿದ್ದು, ರಾಜೀ ತೀರ್ಮಾನದ ಮೂಲಕ ಸಾವಿರಾರು ಪ್ರಕರಣಗಳ ಇತ್ಯರ್ಥ ಮಾಡಲಾಗುವುದು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ ಕುಮಾರ್ ತಿಳಿಸಿದರು.

ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಎಲ್ಲಾ ಜಿಲ್ಲೆಯ ಸತ್ರ ನ್ಯಾಯಾಧೀಶರು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆಗಳು ತಡವಾಗುತ್ತಿವೆ. ಹಾಗಾಗಿ ಬಾಕಿ ಇರುವ, ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿ ವಿಲೇವಾರಿ ಮಾಡಿ ತ್ವರಿತ ನ್ಯಾಯ ಒದಗಿಸಲು ಇ-ಲೋಕ್ ಅದಾಲತ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಸೆಪ್ಟಂಬರ್ 19 ರಂದು ಪ್ರಪ್ರಥಮವಾಗಿ ಇ-ಲೋಕ್ ಅದಾಲತ್ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನದ ಬಳಕೆ ಮೂಲಕ ಕಕ್ಷಿದಾರರು ತಮ್ಮ ವಕೀಲರ ಮೂಲಕ‌ ಅಥವಾ ನೇರವಾಗಿ ಕುಳಿತಲ್ಲಿಂದಲೇ ರಾಜೀ ಸಂಧಾನದಲ್ಲಿ ಪಾಲ್ಗೊಂಡು ನ್ಯಾಯಾಲಯದ ತೀರ್ಪು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಇ ಲೋಕ ಅದಾಲತ್​ನಲ್ಲಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥ

ಸರ್ವರಿಗೂ ಒಂದೇ ರೀತಿಯ ನ್ಯಾಯ ಒದಗಿಸಲಾಗುವುದು. ಇಲ್ಲಿ ನೀಡುವ ತೀರ್ಮಾನವನ್ನು ಇತರ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ. ಹೆಚ್ಚಾಗಿ ಅಪಘಾತ ಪ್ರಕರಣಗಳು, ಚೆಕ್ ಬೌನ್ಸ್ ಮತ್ತಿತರ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು. ಈಗಾಗಾಲೇ ಇನ್ಸ್ಯೂರೆನ್ಸ್ ಕಂಪನಿಗಳ ಪ್ರತಿನಿಧಿಗಳೊಂದಿಗೂ ಚರ್ಚಿಸಲಾಗಿದೆ. 8-10ವರ್ಷಗಳ ಹಿಂದೆ ನಡೆದ ಅಪಘಾತಗಳು ಇನ್ನೂ ಪರಿಹಾರವಾಗಿಲ್ಲ. ಇವುಗಳನ್ನು ಇ-ಲೋಕ್ ಅದಾಲತ್ ಮೂಲಕ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಯಾವುದಾದರೂ ಕೇಸ್‍ಗಳ ಇತ್ಯರ್ಥ ಮಾಡಿಕೊಳ್ಳಲು ಕೋರ್ಟ್ ಅಥವಾ ಕಚೇರಿಗಾಗಲಿ ಹೋಗುವ ಅವಶ್ಯಕತೆ ಇಲ್ಲ, ಅವರ ಸ್ಥಾನದಲ್ಲಿಯೇ ಕುಳಿತು ತಮ್ಮ ವಕೀಲರ ಮುಖಾಂತರ ಎಲ್ಲಾ ರೀತಿಯ ಮೂಲಾಧಾರಗಳನ್ನು ಒದಗಿಸಿದರೆ ನಿಯಮಾನುಸಾರ ನೀಡಬೇಕಾದ ಪರಿಹಾರ ಇತ್ಯರ್ಥವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಇ-ಲೋಕ್ ಅದಾಲತ್‍ನಲ್ಲಿ ವಿಲೇವಾರಿ‌ ಮಾಡಲು 5,925 ಪ್ರಕರಣಗಳನ್ನು ಗುರುತಿಸಲಾಗಿದೆ. ಇದೊಂದು ಹೊಸ ಪ್ರಯತ್ನ, ಈಗಾಗಲೇ ತಾಲೂಕು ನ್ಯಾಯಾಧೀಶರು, ವಕೀಲರು ವಿಮಾ ಸಂಸ್ಥೆಗಳ ಗಮನಕ್ಕೆ ತರಲಾಗಿದ್ದು,‌ ಆದಷ್ಟು ಹೆಚ್ಚು ಪ್ರಕರಣ ಇತ್ಯರ್ಥ ಮಾಡಲಾಗುವುದು. ಇದರಿಂದ ಕಕ್ಷಿದಾರರು ವಕೀಲರು, ವಿಮಾ ಸಂಸ್ಥೆಗಳು, ಬ್ಯಾಂಕುಗಳಿಗೂ ಅನುಕೂಲ ಆಗಲಿದೆ ಎಂದು ನ್ಯಾ. ಶಿವಣ್ಣ ಹೇಳಿದರು.

ABOUT THE AUTHOR

...view details