10 ಲಕ್ಷ ಜನರ ಮೇಲೆ ನಿಗಾ ಇಡಲು ರೇಡಿಯೋ ಕಾಲರ್ ಮಾದರಿ ವಾಚ್ ಬಳಕೆ: ಡಾ.ಸುಧಾಕರ್... - ರಾಜ್ಯದಲ್ಲಿ 10 ಲಕ್ಷ ಜನರನ್ನು ನಿಗಾ ಇಡಲು ತಂತ್ರಜ್ಞಾನ
ರಾಜ್ಯದಲ್ಲಿ 10 ಲಕ್ಷ ಜನರ ಮೇಲೆ ನಿಗಾ ಇಡಲು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ರೇಡಿಯೋ ಕಾಲರ್ ಮಾದರಿ ವಾಚ್ ಬಳಕೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.
![10 ಲಕ್ಷ ಜನರ ಮೇಲೆ ನಿಗಾ ಇಡಲು ರೇಡಿಯೋ ಕಾಲರ್ ಮಾದರಿ ವಾಚ್ ಬಳಕೆ: ಡಾ.ಸುಧಾಕರ್... Dr. Sudhakar ...](https://etvbharatimages.akamaized.net/etvbharat/prod-images/768-512-7443070-864-7443070-1591086496488.jpg)
ಹಾಸನ: ಕ್ವಾರಂಟೈನ್ ಕೇಂದ್ರದಿಂದ ಹೊರ ಬಂದವರನ್ನು, ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುವುದು. ಹೋಮ್ ಕ್ವಾರಂಟೈನ್ ಆಗುವವರಿಗೆ ನೂತನ ತಂತ್ರಜ್ಞಾನ (ವಾಚ್) ಇರುವ ಅಳವಡಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಹೋದವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ನಲ್ಲಿರಬೇಕು. ಬಹಳ ಜನ ಹೊರ ಬರುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ 10 ಲಕ್ಷ ಜನರ ಮೇಲೆ ನಿಗಾ ಇಡಲು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.
ಹೀಗಾಗಿ ತಂತ್ರಜ್ಞಾನ ಹೊಂದಿರುವ ವಾಚ್ ಬಳಸಿಕೊಂಡು ನಿಗಾ ಇಡಲಾಗುವುದು. ಕ್ವಾರಂಟೈನ್ ನಿಗಾ ಇಡಲು ಅಗತ್ಯ ಸಿಬ್ಬಂದಿ ನೇಮಿಸಲಾಗುವುದು. ಇಂದು ಸಂಜೆ ಇವತ್ತು ಎಷ್ಟು ಜನರಿಗೆ ಪಾಸಿಟಿವ್ ಬಂದಿದೆ ಎಂಬುದು ತಿಳಿಯಲಿದೆ. ಅಲ್ಲದೇ ಉಡುಪಿಯಲ್ಲಿ ಹೆಚ್ಚು ಪಾಸಿಟಿವ್ ಬರುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.