ಅರಕಲಗೂಡು:ಅರಕಲಗೂಡು ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ 1.5 ಲಕ್ಷ ಬೆಲೆ ಬಾಳುವ 15 ಕುರಿ ಹಾಗೂ 4 ಟಗರು ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಅಸ್ಲಂ ಪಾಷ ಎಂಬುವರು ಅರಕಲಗೂಡು ಬೈಪಾಸ್ ರಸ್ತೆಯ ಉರ್ದು ಶಾಲೆಯ ಹಿಂಬಾಗ ಕುರಿ ಹಾಗೂ ಟಗರುಗಳನ್ನು ಶೆಡ್ ಮುಂಬಾಗ ಮೇಯಲು ಬಿಟ್ಟು ಕೆಲಸದ ನಿಮಿತ್ತ ಸ್ವಲ್ಪ ಸಮಯ ಹೊರಗಡೆ ಹೋಗಿದ್ದಾರೆ. ಇದನ್ನೇ ಹೊಂಚು ಹಾಕಿ ಕಾದು ಕುಳಿತ್ತಿದ್ದ ಕಳ್ಳ ಅವಕಾಶ ಮಾಡಿಕೊಂಡು ಶೆಡ್ನಲ್ಲಿದ್ದ ಎಲ್ಲಾ 15 ಕುರಿಗಳು ಹಾಗೂ 4 ಟಗರುಗಳನ್ನು ದಿನಾಂಕ 20/08/2020 ರಂದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.