ಕರ್ನಾಟಕ

karnataka

ETV Bharat / state

ಪೌರಾಣಿಕ ನಾಟಕಗಳ ಸಂಸ್ಕೃತಿ ನೇಪಥ್ಯಕ್ಕೆ.. ರಂಗಭೂಮಿ ಹಿರಿಯ ಕಲಾವಿದ ಕೆ ಕೆ ರಂಗಸ್ವಾಮಿ ಕಳವಳ.. - Theater artist KKRangaswami talk about Mythical plays

ಆಧುನಿಕ ಭರಾಟೆಗೆ ಸಿಲುಕಿ ಪೌರಾಣಿಕ ನಾಟಕಗಳ ಸಂಸ್ಕೃತಿ ನೇಪಥ್ಯ ಸರಿಯುತ್ತಿರುವ ಸಂದರ್ಭದಲ್ಲಿ ಅದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ರಂಗಭೂಮಿ ಹಿರಿಯ ಕಲಾವಿದ ಕೆ ಕೆ ರಂಗಸ್ವಾಮಿ ಅಭಿಪ್ರಾಯಪಟ್ಟರು.

ಕಲಾವಿದ ಕೆ.ಕೆ.ರಂಗಸ್ವಾಮಿ

By

Published : Sep 27, 2019, 10:15 AM IST

ಆಲೂರು: ಆಧುನಿಕ ಭರಾಟೆಗೆ ಸಿಲುಕಿ ಪೌರಾಣಿಕ ನಾಟಕಗಳ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿರುವ ಸಂದರ್ಭದಲ್ಲಿ ಅದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ರಂಗಭೂಮಿ ಹಿರಿಯ ಕಲಾವಿದ ಕೆ ಕೆ ರಂಗಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲೆಯ ಆಲೂರು ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಆಯೋಜಿಸಿದ್ದ ಪೌರಾಣಿಕ ನಾಟಕಗಳ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಪೌರಾಣಿಕ ನಾಟಕಗಳು ಹೆಚ್ಚು ಪ್ರದರ್ಶನಗೊಂಡು ಜನ ಮಾನಸದಲ್ಲಿ ಉಳಿಯುತ್ತಿದ್ದವು. ಅಲ್ಲದೇ ನಾಟಕಗಳ ಪಾತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದ ಸಂದರ್ಭವೂ ಇದ್ದವು.ಆದರೆ, ಇಂದು ಪ್ರದರ್ಶನವೇ ಕ್ಷೀಣಿಸುತ್ತಿದೆ. ಅದಕ್ಕೆ ತಗಲುವ ಖರ್ಚು ಕೂಡ ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮದ ಪರಮೇಶ್ ಅವರು ಕಲೆಗೆ ನೀಡುತ್ತಿರುವ ಪ್ರೋತ್ಸಾಹವನ್ನು ನಾವು ಅಭಿನಂದಿಸಲೇಬೇಕು. ಅವರಂತೆಯೇ ಎಲ್ಲರೂ ಸಂಸ್ಕೃತಿ ಉಳಿಸುವಂತಹ ಕೆಲಸಗಳನ್ನ ಮಾಡಿ ಎಂದು ಸಲಹೆಯನ್ನಿತ್ತರು.

ಪೌರಾಣಿಕ ನಾಟಕಗಳ ಸಂಸ್ಕೃತಿ ನೇಪಥ್ಯಕ್ಕೆ..

ಹಿರಿಯ ರಂಗಭೂಮಿ ಕಲಾವಿದ ರಾಮಲಿಂಗೇಗೌಡ ಮಾತನಾಡಿ, ಈ ಹಿಂದೆ ಗ್ರಾಮೀಣ ಭಾಗದಲ್ಲಿ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದವು. ಆದರೆ, ಸಿನಿಮಾ ಮತ್ತು ಮಾಧ್ಯಮಗಳ ಹಾವಳಿಯಿಂದ ಇಂದು ನಾಟಕಗಳು ಪ್ರದರ್ಶನಗೊಂಡರು ಪ್ರೇಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಹಾಗೂ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ನಾಟಕಗಳು ಹೆಚ್ಚು ಪ್ರದರ್ಶನವಾಗಬೇಕು. ಇದಕ್ಕೆ ಪ್ರೋತ್ಸಾಹಕರು ಸಹಕಾರ ನೀಡಬೇಕಾಗಿದೆ. ಇದನ್ನು ಕಲಾವಿದರಾದ ನಾವುಗಳು ಉಳಿಸಿ ಕಾರ್ಯವನ್ನ ಮಾಡುವ ಮೂಲಕ ಪ್ರೇಕ್ಷಕರನ್ನು ಆಕರ್ಷಣೆ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ತುರಗನಹಳ್ಳಿ ಗ್ರಾಮದ ಸಮಾಜ ಸೇವಕ ಪರಮೇಶ್ ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ರಂಗಭೂಮಿ ಹಿರಿಯ ಕಲಾವಿದ ಡಿ.ವಾಸುದೇವ್, ರಾಮಲಿಂಗೇಗೌಡ, ಶಶಿಕುಮಾರ್, ಕುಮಾರ್, ಹಿರಿಯ ಕಲಾವಿದ ಪುಟ್ಟಣ್ಣ, ಪತ್ರಕರ್ತ ಟಿ ಕೆ ಕುಮಾರಸ್ವಾಮಿ, ಗ್ರಂಥಪಾಲಕ ನಾಗರಾಜು, ಸಂಗೀತ ನಿರ್ದೇಶಕ ಅಣ್ಣಪ್ಪ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details