ಕರ್ನಾಟಕ

karnataka

ETV Bharat / state

ದ್ರಾಕ್ಷಿ ಹಣ್ಣುಗಳಿಗೆ ಎಂಜಲು ಹಚ್ಚಿರೋದು ಸುಳ್ಳು.. ವಿಡಿಯೋ ಹರಿಬಿಟ್ಟವರಿಗಾಗಿ ಹಾಸನ ಪೊಲೀಸರ ಶೋಧ.. - ತಿರುಚಿದ ವಿಡಿಯೋ ಪತ್ತೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಮೂವರು ಯುವಕರು ಹಣ್ಣನ್ನು ಬಾಯಿಗಿಡುವ ಫಾಸ್ಟ್ ಫಾರ್ವರ್ಡ್ ದೃಶ್ಯವಿತ್ತು. ದುರುದ್ದೇಶದಿಂದ ದ್ರಾಕ್ಷಿ ಹಣ್ಣುಗಳಿಗೆ ಎಂಜಲು ಹಚ್ಚಲಾಗಿದೆ ಎಂದು ವಿಡಿಯೋ ಹರಿಬಿಡಲಾಗಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿತ್ತು.

the-video-of-the-leftovers-for-grapefruit-was-tweaked
ದ್ರಾಕ್ಷಿ ಹಣ್ಣುಗಳಿಗೆ ಎಂಜಲು ಹಚ್ಚುವ ವಿಡಿಯೋ

By

Published : Apr 7, 2020, 5:48 PM IST

ಹಾಸನ : ನಗರದ ಉತ್ತರ ಬಡಾವಣೆಯ ಸ್ಕಾಲರ್ ಶಾಲೆ ಹಿಂಭಾಗದ ರಸ್ತೆಯಲ್ಲಿ ಭಾನುವಾರ ಹಣ್ಣುಗಳಿಗೆ ಯುವಕರು ಎಂಜಲು ಹಚ್ಚುತ್ತಿದ್ದರು ಎಂಬ ಅಡಿ ಬರಹದೊಂದಿಗೆ ವೈರಲ್ ಆಗಿದ್ದ ವಿಡಿಯೋದಲ್ಲಿದ್ದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ಅದು ತಿರುಚಿದ ವಿಡಿಯೋ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

ದ್ರಾಕ್ಷಿ ಹಣ್ಣುಗಳಿಗೆ ಎಂಜಲು ಹಚ್ಚುವ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಮೂವರು ಯುವಕರು ಹಣ್ಣನ್ನು ಬಾಯಿಗಿಡುವ ಫಾಸ್ಟ್ ಫಾರ್ವರ್ಡ್ ದೃಶ್ಯವಿತ್ತು. ದುರುದ್ದೇಶದಿಂದ ದ್ರಾಕ್ಷಿ ಹಣ್ಣುಗಳಿಗೆ ಎಂಜಲು ಹಚ್ಚಲಾಗಿದೆ ಎಂದು ವಿಡಿಯೋ ಹರಿಬಿಡಲಾಗಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿತ್ತು. ಈ ಬಗ್ಗೆ ತಕ್ಷಣ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ ತನಿಖೆಗೆ ಸೂಚನೆ ನೀಡಿದ್ದರು. ಭಾನುವಾರ ರಾತ್ರಿ ವೇಳೆಗೆ ವಿಡಿಯೋದಲ್ಲಿದ್ದ ಯುವಕರನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದಾಗ ಅವರು, ತಾವು ಆಟೋ ನಿಲ್ಲಿಸಿಕೊಂಡು ಹಣ್ಣು ತಿನ್ನುತ್ತಿದ್ದುದ್ದಾಗಿ ಮಾಹಿತಿ ನೀಡಿದ್ದಾರೆ. ಅವರನ್ನು ಹಿಮ್ಸ್ ಆಸ್ಪತ್ರೆಯಲ್ಲಿ ಕರೆದೊಯ್ದು ತಪಾಸಣೆ ನಡೆಸಿದಾಗ ಅವರಲ್ಲಿ ಯಾರಿಗೂ ಆರೋಗ್ಯ ಸಮಸ್ಯೆ ಇರಲಿಲ್ಲ ಎನ್ನುವುದು ಖಚಿತವಾಗಿದೆ. ಆದರೂ ಅವರನ್ನು ನಿಗಾದಲ್ಲಿರಲು ಸೂಚಿಸಲಾಗಿದೆ. ಹಣ್ಣುಗಳನ್ನು ಆಹಾರ ಪರಿವೀಕ್ಷಕರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ವಿಡಿಯೋ ಚಿತ್ರೀಕರಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುವ ರೀತಿ ವೈರಲ್ ಮಾಡಿದವರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details