ಹಾಸನ: ನಗರದ ಹೊಸಕೊಪ್ಪಲಿನ ಎಲ್‌ವಿಜಿಎಸ್ ಜ್ಞಾನ ಗುರುಕುಲ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಎಲ್‌ಕೆಜಿ ಓದುತ್ತಿರುವ 5 ವರ್ಷದ ಮಗುವಿಗೆ ಶಿಕ್ಷಕಿ ಹೊಡೆದ ಪರಿಣಾಮ ಕಣ್ಣಿಗೆ ಪೆಟ್ಟಾಗಿದೆ ಎಂದು ಮಗುವಿನ ತಾಯಿ ರಾಣಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿ: ಪೊಲೀಸರಿಗೆ ದೂರು ನೀಡಿದ ತಾಯಿ - ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿ
ನಗರದ ಹೊಸಕೊಪ್ಪಲಿನ ಎಲ್‌ವಿಜಿಎಸ್ ಜ್ಞಾನ ಗುರುಕುಲ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಎಲ್‌ಕೆಜಿ ಓದುತ್ತಿರುವ 5 ವರ್ಷದ ಮಗುಗೆ ಶಿಕ್ಷಕಿ ಹೊಡೆದ ಪರಿಣಾಮ ಕಣ್ಣಿಗೆ ಪೆಟ್ಟಾಗಿದೆ ಎಂದು ಮಗುವಿನ ತಾಯಿ ರಾಣಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆಗಸ್ಟ್ 13ರಂದು ಸರಿಯಾಗಿ ಓದುವುದಿಲ್ಲವೆಂದು ಶಾಲೆಯ ವ್ಯವಸ್ಥಾಪಕಿ ಮತ್ತು ಶಿಕ್ಷಕಿ ಮಗನಿಗೆ ಕೋಲಿನಿಂದ ಹೊಡೆದ ಕಾರಣ ಎಡಗಣ್ಣಿಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ನನಗೆ ಕರೆ ಮಾಡಿ ಮಗುವನ್ನು ಕರೆದುಕೊಂಡು ಹೋಗುವಂತೆ ಹೇಳಿದರು ಎಂದು ಮಗುವಿನ ತಾಯಿ ಹೇಳಿದ್ದಾರೆ.
ಶಾಲೆಯಿಂದ ಮಗನನ್ನು ಕರೆದುಕೊಂಡು ಬಂದು ಹಾಸನ ಐ ಕೇರ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಆರು ಹೊಲಿಗೆ ಹಾಕಲಾಗಿದೆ. ವೈದ್ಯರ ಪ್ರಕಾರ ಆತನ ಎಡಗಣ್ಣಿಗೆ ದೃಷ್ಟಿ ಬರುವ ಬಗ್ಗೆ ಖಚಿತವಾಗಿ ಹೇಳಿಲ್ಲ. ಬಳಿಕ ಮಗುವನ್ನು ವಿಚಾರಿಸಿದಾಗ ಶಿಕ್ಷಕಿ ಹೊಡೆದಿರುವುದನ್ನು ತಿಳಿಸಿದೆ. ನಂತರ ಶಾಲಾ ಆಡಳಿತ ಮಂಡಳಿಯವರನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡಲಿಲ್ಲ ಎನ್ನಲಾಗಿದೆ. ಈ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಾಯಿ ಮನವಿ ಮಾಡಿದ್ದಾರೆ.