ಕರ್ನಾಟಕ

karnataka

ETV Bharat / state

ದಿನಸಿ ವ್ಯಾಪಾರಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅಂಗಡಿ ಮಾಲೀಕರು.. - ವ್ಯಾಪಾರಸ್ಥರು ಸಾಮಾಜಿಕ ಅಂತರದಲ್ಲಿ ದಿನಸಿ ವ್ಯಾಪಾರ

ಹಾಸನದಲ್ಲಿ ವ್ಯಾಪಾರಸ್ಥರು ಸಾಮಾಜಿಕ ಅಂತರದಲ್ಲಿ ದಿನಸಿ ವ್ಯಾಪಾರವನ್ನು ಮಾಡಲಾಗುತ್ತಿದ್ದರೂ ಕೂಡ ಗುರುವಾರ ಬೆಳಗ್ಗೆ ನಗರಸಭೆ ಆಯುಕ್ತರು ಕಟ್ಟಿನ ಕೆರೆಯ ಎಲ್ಲಾ ಅಂಗಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ನಿಗಧಿ ಮಾಡಿರುವ ಬಸ್ ನಿಲ್ದಾಣ, ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯಾಪಾರ ಮಾಡಲು ಹೇಳಿದ್ದಾರೆ.

The shop owner appealed to the district officials to grant permission for the grocery business
ದಿನಸಿ ವ್ಯಾಪಾರಕ್ಕೆ ಅನುಮತಿ ನಿಡುವಂತೆ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದ ಅಂಗಡಿ ಮಾಲೀಕರು.

By

Published : Apr 2, 2020, 8:15 PM IST

ಹಾಸನ :ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರದಲ್ಲಿಯೇ ದಿನಸಿ ವ್ಯಾಪಾರವನ್ನು ಮಾಡಲಾಗುತ್ತಿದೆ. ಆದರೆ, ಏಕಾಏಕಿ ಬಾಗಿಲು ಹಾಕಿಸಿರುವುದರಿಂದ ಮತ್ತೆ ಬಾಗಿಲು ತೆಗೆಯಲು ಅವಕಾಶ ಕಲ್ಪಿಸುವಂತೆ ಅಂಗಡಿ ಮಾಲೀಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ದಿನಸಿ ವ್ಯಾಪಾರಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅಂಗಡಿ ಮಾಲೀಕರು..

ಕೊರೊನಾ ವೈರಸ್ ಭಾರತದೆಲ್ಲೆಡೆ ಹರಡುವ ಭೀತಿಯಲ್ಲಿ ಸರ್ಕಾರವು ಕೆಲ ಕಾನೂನುಗಳನ್ನು ತಂದು ವ್ಯಾಪಾರ ವಹಿವಾಟುಗಳನ್ನು ನಿಗಧಿತ ದಿನಗಳ ಸಮಯದಲ್ಲಿ ಮಾಡಲು ಆದೇಶ ಮಾಡಿರುವುದರಿಂದ, ವ್ಯಾಪಾರಸ್ಥರು ಸಾಮಾಜಿಕ ಅಂತರದಲ್ಲಿ ದಿನಸಿ ವ್ಯಾಪಾರವನ್ನು ಮಾಡಲಾಗುತ್ತಿದ್ದರೂ ಕೂಡ ಗುರುವಾರ ಬೆಳಗ್ಗೆ ನಗರಸಭೆ ಆಯುಕ್ತರು ಕಟ್ಟಿನ ಕೆರೆಯ ಎಲ್ಲಾ ಅಂಗಡಿಗಳನ್ನು ಮುಚ್ಚಲು ಸೂಚನೆ ನೀಡಿದ್ದಾರೆ. ನಿಗದಿ ಮಾಡಿರುವ ಬಸ್ ನಿಲ್ದಾಣ, ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯಾಪಾರ ಮಾಡಲು ಹೇಳಿದ್ದಾರೆ.

ನೂರಾರು ಕೆಜಿ ಅಕ್ಕಿ, ದಿನಸಿ ವಸ್ತುಗಳನ್ನು ತರುವುದು ಕಷ್ಟಕರ. ಸಾಮಾಜಿಕ ಅಂತರದಲ್ಲೇ ವ್ಯಾಪಾರ ಮಾಡುತ್ತಿದೆ. ಈಗಿರುವ ಕಟ್ಟಿನಕೆರೆ ಮಾರುಕಟ್ಟೆಯಲ್ಲೇ ವ್ಯಾಪಾರ ಮಾಡಲು ಅವಕಾಶ ಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details