ಕರ್ನಾಟಕ

karnataka

ETV Bharat / state

ಸ್ಪೀಡ್​ ಬ್ರೇಕರ್​ ಮೇಲೆ ಜಂಪ್​: ಬಸ್​ನಲ್ಲಿಯೇ ಹೆರಿಗೆ

ಸ್ಪೀಡ್ ಬ್ರೇಕರ್ ಮೇಲೆ ಜಂಪ್ ಆದ ಹಿನ್ನೆಲೆ ಬಸ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಹಾಸನ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

The mother who gave birth to a baby girl on the bus
ತಾಯಿ ಸಬೀನಾ ಹಾಗೂ ಹೆಣ್ಣು ಮಗು

By

Published : Feb 19, 2020, 1:03 PM IST

Updated : Feb 19, 2020, 1:30 PM IST

ಹಾಸನ:ಸ್ಪೀಡ್ ಬ್ರೇಕರ್ ಮೇಲೆ ಜಂಪ್ ಆದ ಹಿನ್ನೆಲೆ ಬಸ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸ್ಪೀಡ್​​ ಬ್ರೇಕರ್​​ ಮೇಲೆ ಜಂಪ್​, ಬಸ್​ನಲ್ಲಿಯೇ ಹೆರಿಗೆ

ಮಡಿಕೇರಿಯಿಂದ ಹಾಸನ ಮಾರ್ಗವಾಗಿ ಹುಬ್ಬಳಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ನಗರದ ಹೊಸ ನಿಲ್ದಾಣದಲ್ಲಿ ಅತೀ ವೇಗ ನಿಯಂತ್ರಕದ ಮೇಲೆ ವೇಗವಾಗಿ ಬಸ್​ ಹೋಗಿದ್ದು, ಗರ್ಭಿಣಿ ಸಬೀನಾಗೆ ಇದರಿಂದ ನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಿದ್ದಾರೆ. ಬಸ್​ನಿಂದ ತುರ್ತು ವಾಹನಕ್ಕೆ ಗರ್ಭಿಣಿಯನ್ನು ವರ್ಗಾಯಿಸಬೇಕಿತ್ತು.

ತೀವ್ರ ನೋವಿನಿಂದ ಬಳಲುತ್ತಿದ್ದ ಸಬೀನಾ ಬಸ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಗರ್ಭಿಣಿ ಹಾಗೂ ತಾಯಿ ರುಬೀನಾ ಅರಸೀಕೆರೆಗೆ ಹೊರಟಿದ್ದರು. ವೇಗವಾಗಿ ಬಸ್​ ಚಲಾಯಿಸಿದ ಚಾಲಕನ ನಿರ್ಲಕ್ಷ್ಯದಿಂದ ಇಂಥದ್ದೊಂದು ಘಟನೆ ಸಂಭವಿಸಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Last Updated : Feb 19, 2020, 1:30 PM IST

ABOUT THE AUTHOR

...view details