ಸಕಲೇಶಪುರ:ತಾಲೂಕಿನ ಮಳಲಿ ಗ್ರಾಮದಲ್ಲಿ ಕಾಡಾನೆಯೊಂದು ಮರಿ ಹಾಕಿದೆ. ಆದ್ರೆ ನಿತ್ರಾಣಗೊಂಡಿರುವ ಮರಿಯಾನೆಯನ್ನು ಸ್ಥಳದಿಂದ ಕರೆದೊಯ್ಯಲಾಗದ ತಾಯಿ ಆನೆ ನಿತ್ಯ ರೋಧನೆ ಅನುಭವಿಸುತ್ತಿರುವ ದೃಶ್ಯ ನೋಡುಗರಿಗೆ ಮಮ್ಮಲ ಮರುಗುವಂತೆ ಮಾಡುತ್ತಿದೆ.
ಮರಿ ಹಾಕಿದ ಕಾಡಾನೆ: ಸ್ಥಳದಿಂದ ಕಂದನ ಕರೆದೊಯ್ಯಲಾಗದೆ ತಾಯಿಯ ರೋಧನೆ
ಮಳಲಿ ಗ್ರಾಮದ ಅನಿಲ್ ಎಂಬುವರ ಕಾಫಿ ತೋಟದಲ್ಲಿ ಕಾಡಾನೆಯೊಂದು ಕಳೆದ 5 ದಿನಗಳ ಹಿಂದೆ ಮರಿ ಹಾಕಿದೆ. ಆದರೆ, ಈ ಸಂದರ್ಭದಲ್ಲಿ ಮರಿ ಸ್ಥಳದಿಂದ ಏಳಲಾರದ ಸ್ಥಿತಿಯಲ್ಲಿರುವುದರಿಂದ ತಾಯಿಯು ಅದನ್ನು ಕಾಡಿಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಮರಿಯನ್ನು ಕರೆದೊಯ್ಯಲು ತಾಯಿ ಆನೆ ತನ್ನ ಇನ್ನೊಂದು ಮರಿಯಾನೆಯೊಂದಿಗೆ ಸ್ಥಳಕ್ಕೆ ಬಂದು ಹರಸಾಹಸ ಪಡುತ್ತಿದೆ.
ತಾಲೂಕಿನ ಮಳಲಿ ಗ್ರಾಮದ ಅನಿಲ್ ಎಂಬುವರ ಕಾಫಿ ತೋಟದಲ್ಲಿ ಕಾಡಾನೆಯೊಂದು ಕಳೆದ 5 ದಿನಗಳ ಹಿಂದೆ ಮರಿ ಹಾಕಿದೆ. ಈ ಸಂದರ್ಭದಲ್ಲಿ ಮರಿ ಸ್ಥಳದಿಂದ ಏಳಲಾರದ ಸ್ಥಿತಿಯಲ್ಲಿದೆ. ತಾಯಿಯು ಅದನ್ನು ಕಾಡಿಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಮರಿಯನ್ನು ಕರೆದೊಯ್ಯಲು ತಾಯಿ ಆನೆ ತನ್ನ ಇನ್ನೊಂದು ಮರಿಯಾನೆಯೊಂದಿಗೆ ಸ್ಥಳಕ್ಕೆ ಬಂದು ಚಡಪಡಿಸುತ್ತದೆ. ತನ್ನ ನಿಸ್ಸಾಹಕತೆಯಿಂದ ಬೇಸತ್ತು ಸಿಟ್ಟಿನಿಂದ ತೋಟದಲ್ಲಿ ದಾಂಧಲೆ ನಡೆಸಿದ ಹಿನ್ನೆಲೆ ಸುಮಾರು 80 ವರ್ಷಕ್ಕೂ ಹಳೆಯ ಹಲವು ಕಾಫಿ ಗಿಡಗಳು ಸಂಪೂರ್ಣವಾಗಿ ನಾಶವಾಗಿವೆ.
ಕಾಡಾನೆ ಮರಿ ಹಾಕಿರುವ ವಿಷಯ ಎರಡು ದಿನ ತಡವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ವತಿಯಿಂದ ಮರಿ ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ರಾತ್ರಿ ಸ್ಥಳಕ್ಕೆ ಬಂದಿದ್ದ ತಾಯಿ ಆನೆ ಮತ್ತೆ ಈ ಸ್ಥಳಕ್ಕೆ ಬಂದಿಲ್ಲ. ತಾಯಿ ಆನೆ ಮರಿಯಾನೆಯನ್ನು ಕರೆದೊಯ್ಯುತ್ತದೆ ಎಂಬ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ. ಶುಕ್ರವಾರ ರಾತ್ರಿಯೊಳಗೆ ತಾಯಿ ಆನೆ ಮರಿಯಾನೆಯನ್ನು ಕರದೊಯ್ಯದಿದ್ದಲ್ಲಿ ಶನಿವಾರ ಸಕ್ಕರೆ ಬೈಲು ಅರಣ್ಯಾಧಾಮಕ್ಕೆ ಕಳುಹಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.