ಹಾಸನ: ಸಕಲೇಶಪುರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ಸಕಲೇಶಪುರ ತಾಲೂಕಿನ ಧೋನಿಗಲ್ ಸಮೀಪ ನಡೆದಿದೆ.
ಸುರಿದ ಭಾರೀ ಮಳೆಗೆ ಮನೆ ಕುಸಿತ: ಪ್ರಾಣಾಪಾಯದಿಂದ ಪಾರಾದ ಕುಟುಂಬ! - ಮನೆ ಕುಸಿತ
ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ಸಕಲೇಶಪುರ ತಾಲೂಕಿನ ಧೋನಿಗಲ್ ಸಮೀಪ ನಡೆದಿದೆ.
ದಿವಂಗತ ಅಲಿ ಎಂಬವರಿಗೆ ಸೇರಿದ ಈ ಮನೆ ನಿನ್ನೆ ಬೆಳಗಿನ ಜಾವ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಮಾತನಾಡಿದ ಆನೆಮಹಲ್ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹಸೈನಾರ್ ಘಟನೆ ಬೆಳಗಿನ ಜಾವ ನಡೆದಿರುವುದರಿಂದ ನಡೆಯಬಹುದಾದ ಸಾವು ನೋವು ತಪ್ಪಿದೆ, ಇಲ್ಲವಾದರೇ ಭಾರಿ ದುರಂತ ಎದುರಿಸಬೇಕಾಗಿತ್ತು ಎಂದರು.
ಸಂತ್ರಸ್ತ ಕುಟುಂಬ ಕಡು ಬಡತನದಲ್ಲಿದ್ದು, ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸರಕಾರ ಕೂಡಲೇ ಇವರ ನೆರವಿಗೆ ಧಾವಿಸಿ ಪುನರ್ವಸತಿ ನಿರ್ಮಿಸಲು ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.