ಕರ್ನಾಟಕ

karnataka

ETV Bharat / state

ಕುಟುಂಬ ರಾಜಕಾರಣದ ಅಂತ್ಯಕ್ಕೆ ಇದೇ ಸುವರ್ಣಾವಕಾಶ: ಪ್ರೀತಂ ಗೌಡ - kannada news paper

ರಾಜ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಇದೇ ಸುವರ್ಣಾವಕಾಶ. ಮೋದಿಯನ್ನ ಬೆಂಬಲಿಸಿ ಬಿಜೆಪಿಯನ್ನ ಗೆಲ್ಲಿಸಿ ಎಂದು ಪ್ರೀತಂ ಗೌಡ ಕರೆ ನೀಡಿದರು.

ಶಾಸಕ ಪ್ರೀತಂ ಗೌಡ

By

Published : Apr 1, 2019, 11:26 PM IST

ಹಾಸನ: ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದ ಅಂತ್ಯಕ್ಕೆ ಸುವರ್ಣ ಅವಕಾಶ ಬಂದಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಪ್ರೀತಂ ಗೌಡ ಹೇಳಿದರು.

ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಜೆಡಿಎಸ್ ಅನ್ಯಾಯ ಮಾಡಿದೆ. 6 ಬಾರಿ ಶಾಸಕರಾಗಿರುವ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡದೆ ವಂಚಿಸಿದೆ. ರೇವಣ್ಣರ ಬದಲು ಓರ್ವ ದಲಿತ ಶಾಸಕರಿಗೆ ಅವಕಾಶ ಕೊಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಶಾಸಕ ಪ್ರೀತಂ ಗೌಡ

ಜಿಲ್ಲೆಯ ದಲಿತ ನಾಯಕರನ್ನು ತುಳಿಯುತ್ತಿರುವುದಕ್ಕೆ ಇದೇ ಸಾಕ್ಷಿ. ನಾಯಕರ ಹಾಗೂ ಕಾರ್ಯಕರ್ತರ ಉಳಿವಿಗೆ ಈ ಬಾರಿ ಜೆಡಿಎಸ್ ಸೋಲಿಸಲು ಎಲ್ಲರೂ ಸಂಘಟಿತ ಹೋರಾಟ ಮಾಡಬೇಕು ಎಂದು ಕರೆ ನೀಡಿದರು‌. ಕಾಂಗ್ರೆಸ್ ಕಾರ್ಯಕರ್ತರು ಸಹ ಈ ಬಾರಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ, ದೇಶದ ಉಳಿವಿಗೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ABOUT THE AUTHOR

...view details