ಕರ್ನಾಟಕ

karnataka

ETV Bharat / state

ಕೊರೊನಾ ಮಹಾಮಾರಿ ಅಟ್ಟಹಾಸದ ಅಂತ್ಯ ಕುರಿತು ಕೋಡಿ ಮಠದ ಶ್ರೀಗಳ ಭವಿಷ್ಯ ಹೀಗಿದೆ! - hassan news

ಮೇ ತಿಂಗಳ ಅಂತ್ಯಕ್ಕೆ ಮಹಾಮಾರಿ ಕೊರೊನಾ ಕೊನೆಯಾಗಲಿದ್ದು, ಮಹಾಮಾರಿಯ ಗಂಡಾಂತರ ಭಾರತಕ್ಕಿಲ್ಲ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಕೊರೊನಾದಿಂದ‌ ನಾಡ‌ ಅರಸನಿಗೆ ಅಂದರೆ ಯಡಿಯೂರಪ್ಪನವರಿಗೆ ಕಂಟಕ ಇಲ್ಲ. ಕೆಲ ಜನರು ಹಾಗೂ ಕೆಲ‌ ಸಚಿವರಿಗೆ ಕಂಟಕ‌ ಇದೆ ಅಂತಲೂ ಭವಿಷ್ಯ ನುಡಿದಿದ್ದಾರೆ.

The Coronavirus will end by the end of May: Cody matt Swamiji
ಮೇ ತಿಂಗಳಾಂತ್ಯಕ್ಕೆ ಕೊರೊನಾ ಮಾರಿ ಕೊನೆಯಾಗಲಿದೆ: ಕೋಡಿ ಮಠದ ಶ್ರೀ ಭವಿಷ್ಯ

By

Published : Apr 22, 2020, 11:44 PM IST

ಹಾಸನ: ಮೇ ತಿಂಗಳ ಅಂತ್ಯಕ್ಕೆ ಮಹಾಮಾರಿ ಕೊರೊನಾ ಅಟ್ಟಹಾಸ ಕೊನೆಯಾಗಲಿದ್ದು, ಮಹಾಮಾರಿಯ ಗಂಡಾಂತರ ಭಾರತಕ್ಕಿಲ್ಲ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಭವಿಷ್ಯ ನುಡಿದಿದ್ದಾರೆ.

ಹಾಸನದ ಅರಸೀಕೆರೆಯ ಕೋಡಿ ಮಠದಲ್ಲಿ ಮಾತನಾಡಿದ ಶ್ರೀಗಳು, ಪ್ರಕೃತಿ ಜೊತೆ ಜನ ಸಹಕರಿಸಿದ್ದು, ವ್ಯಾಧಿ ಶೀಘ್ರ ದೂರವಾಗಲಿದೆ. ಜನರು ಬಹಳ ಎಚ್ಚರದಿಂದ ಸರ್ಕಾರದ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಮೆರಿಕಾಗೆ ಇನ್ನೂ ಭಾರಿ ಗಂಡಾಂತರವಿದ್ದು, ಯುದ್ಧವಿಲ್ಲದೆ ಜನರು ಮಡಿಯುತ್ತಾರೆ ಎಂದು ಭವಿಷ್ಯ ನುಡಿದರು. ಈ ರೋಗ ಲೋಕ ಪೀಡಕವಾಗಿದೆ. ಜಗತ್ತಿಗೆ ಬಂದಿರೋ ಈ ಕಾಯಿಲೆ ಶೀತ ಪ್ರದೇಶಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಭಾರತದಲ್ಲಿ ದೊಡ್ಡಮಟ್ಟದ ಸಾವು-ನೋವು ಆಗುವುದಿಲ್ಲ. ಕರ್ನಾಟಕಕ್ಕೆ ಯಾವುದೇ ಹೆಚ್ಚಿನ ತೊಂದರೆ ಇಲ್ಲ. ಜನರ ಬೇಜವಾಬ್ದಾರಿಯಿಂದ ಕೆಲ ಸಮಸ್ಯೆ ಆಗುತ್ತಿದೆ.

ಜನರು ಸರ್ಕಾರ ಹಾಗೂ ವೈದ್ಯರ ಸಲಹೆ ಪಾಲಿಸಬೇಕು. ಕೊರೊನಾದಿಂದ‌ ನಾಡ‌ ಅರಸನಿಗೆ ಅಂದರೆ ಯಡಿಯೂರಪ್ಪನವರಿಗೆ ಕಂಟಕ ಇಲ್ಲ. ಕೆಲ ಜನರು ಹಾಗೂ ಸಚಿವರಿಗೆ ಕಂಟಕ‌ ಇದೆ ಎಂದು ಭವಿಷ್ಯ ನುಡಿದಿದ್ದಾರೆ.

ABOUT THE AUTHOR

...view details