ಕರ್ನಾಟಕ

karnataka

ETV Bharat / state

ಹೊಳೆರಸಿಪುರದಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು... 5 ಮನೆಗಳು ಕುಸಿತ - ನೋಡುನೋಡುತ್ತಿದ್ದಂತೆ ಕಣ್ಣುಮುಂದೆ ಕುಸಿದ ಮನೆಗಳು

ಮಳೆ ಅಬ್ಬರಕ್ಕೆ ಹಾಸನ ಜಿಲ್ಲೆ ಕೂಡ ನಲುಗಿದೆ. ಹೊಳೆಸರಸಿಪುರದ ಯಾಸಿನ್‌ನಗರ, ಕೆಎನ್‌ಎ ಬಡಾವಣೆಯಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರೆ, ಐದು ಮನೆಗಳು ಕುಸಿದಿವೆ.

ಹಾಸನದಲ್ಲಿ ನೆರೆಭೀತಿ..

By

Published : Aug 11, 2019, 1:07 PM IST

Updated : Aug 11, 2019, 2:24 PM IST

ಹಾಸನ: ಹೊಳೆನರಸಿಪುರ ಪಟ್ಟಣದ ಹೇಮಾವತಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿರುವುದರಿಂದ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದೆ.

ಯಾಸಿನ್‌ನಗರ, ಕೆಎನ್‌ಎ ಬಡಾವಣೆಯಲ್ಲಿ 50 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆಯಿದ್ದು, ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಆಶ್ರಯ ಕೇಂದ್ರ ಅಥವಾ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಲ್ಲಿನ ನಿವಾಸಿಗಳಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪಟ್ಟಣದೊಳಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಇಂದು ಬೆಳಗ್ಗೆ 5 ಕ್ಕೂ ಹೆಚ್ಚು ಮನೆಗಳು ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದಿವೆ.

ಹಾಸನದಲ್ಲಿ ನೆರೆಭೀತಿ..

ಸ್ಥಳೀಯರು ಸುರಕ್ಷಿತ ಕೇಂದ್ರ ಹಾಗೂ ಗಂಜಿ ಕೇಂದ್ರಗಳಿಗೆ ತೆರಳಿರುವುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

ಸ್ಥಳಕ್ಕೆ ತಹಶಿಲ್ದಾರ್ ಕೆ.ಆರ್. ಶ್ರೀನಿವಾಸ್​, ತಾ.ಪಂ. ಇಒ ಯೋಗೇಶ್, ಪುರಸಭಾ ಮುಖ್ಯಾಧಿಕಾರಿ ಬಸವರಾಜು ಕೂಡ ಈ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Aug 11, 2019, 2:24 PM IST

For All Latest Updates

TAGGED:

ABOUT THE AUTHOR

...view details