ಹಾಸನ:ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿ ಕಾವಲು ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಣೆ ಮಾಡಲು ಯತ್ನಿಸುತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಲೂರು ತಾಲೂಕು ವ್ಯಾಪ್ತಿಯ ಕಾಮತಿ ಶೆಟ್ಟಿಹಳ್ಳಿ ಉಮೇಶ್, ಪಾಳ್ಯದ ಸತೀಶ್, ಬೈರಾಪುರದ ಮಹೇಶ್, ಹುಲ್ಲಹಳ್ಳಿಯ ಪ್ರದೀಪ್, ರಮೇಶ ಮತ್ತು ಪ್ರಕಾಶ್ ಬಂಧಿತರು.
ತಾಲೂಕಿನ ನಾಗಸಮುದ್ರ ಗ್ರಾಮದ ಸುರೇಶ್ ಎಂಬಾತ ತನ್ನ ಸಹಚರರೊಂದಿಗೆ ನೀಲಗಿರಿ ಮರಗಳನ್ನು ಪವರ್ ಕಟಿಂಗ್ ಮಿಷನ್ ಬಳಸಿ ಕಟಾವು ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ತಾಲೂಕು ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದಾಳಿ ನಡೆಸಿ 6 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.