ಅರಕಲಗೂಡು: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ: ಶಾಸಕ ಎ.ಟಿ. ರಾಮಸ್ವಾಮಿ - ಶಾಸಕ ಎಟಿ ರಾಮಸ್ವಾಮಿ ಲೆಟೆಸ್ಟ್ ನ್ಯೂಸ್
ತಾಲೂಕಿನ ಶಿಕ್ಷಕರ ಭವನದಲ್ಲಿ ನಿನ್ನೆ ಶಾಸಕ ಎ.ಟಿ. ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಅವರು ತಾಲೂಕಿನ ಶಿಕ್ಷಕರ ಭವನದಲ್ಲಿ ಸರಳವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರ ದಿನಾಚರಣೆಗೆ ಅದಕ್ಕೆ ತಕ್ಕಂತಹ ಗೌರವ ಇರುತ್ತದೆ. ಆದರೆ 2020 ಒಂದು ಕೆಟ್ಟ ವರ್ಷ, ಕೊರೊನಾ ಭೀತಿಯಿಂದ ಯಾವ ಕಾರ್ಯಕ್ರಮವನ್ನು ಸಹ ಸರಿಯಾಗಿ ಆಚರಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1888ರಲ್ಲಿ ಜನಿಸಿದರು, ಅವರು ತತ್ವಶಾಸ್ತ್ರ ಅಧ್ಯಯನ ಮಾಡಿದರು, ನಂತರ ಎಂ.ಎ ಮಾಡಿದರು, ಭಾರತದ ರಾಷ್ಟ್ರಪತಿ ಆದರು. ಆ ಮಹಾನ್ ವ್ಯಕ್ತಿ ತನ್ನ ಹುಟ್ಟುಹಬ್ಬದ ಬದಲು ಶಿಕ್ಷಕರ ದಿನಾಚರಣೆ ಮಾಡಿ ಎಂದಿದ್ದರು. ಅದರ ಪ್ರಯುಕ್ತ ಈ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ರತ್ನಮ್ಮ ಲೋಕೇಶ್, ತಾ.ಪಂ ಉಪಾಧ್ಯಕ್ಷ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಶಿವನಂಜೇಗೌಡ, ತಾಲೂಕು ದಂಡಾಧಿಕಾರಿ ವೈ.ಎಂ. ರೇಣುಕುಮಾರ್, ತಾ.ಪಂ. ಸದಸ್ಯ ವಿರಾಜು ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು.