ಕರ್ನಾಟಕ

karnataka

ETV Bharat / state

ಹಾಸನ: ಸಂತೆ ಸುಂಕಕ್ಕೆ ಬ್ರೇಕ್ ಹಾಕಿದ ಶಾಸಕ ಪ್ರೀತಂ ಗೌಡ - ಹಾಸನದಲ್ಲಿ ಸಂತೆ ಸುಂಕ ವಸೂಲಿ ಸುದ್ದಿ

ಹಾಸನ ನಗರದ ಮಂಗಳವಾರದ ವಾರದ ಸಂತೆ ವೇಳೆ ರೈತರಿಂದ ಸುಂಕ ವಸೂಲಿ ಮಾಡದಂತೆ ಶಾಸಕ ಪ್ರೀತಂ ಜೆ. ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

tax
ಶಾಸಕ ಪ್ರೀತಂಗೌಡ ಸೂಚನೆ

By

Published : Feb 10, 2021, 9:35 AM IST

ಹಾಸನ: ರೈತ್ರು ಕಳ್ಳತನ ಮಾಡಿ ಸುಂಕ ಕಟ್ಟಬೇಕಾ...? ಇನ್ನು ಮುಂದೆ ರೈತರಿಂದ ಯಾರೂ ಸಂತೆ ಸುಂಕವನ್ನ ವಸೂಲಿ ಮಾಡಬಾರದು ಎಂದು ಶಾಸಕ ಪ್ರೀತಂ ಜೆ.ಗೌಡ, ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು.

ನಗರದ ಗೊರೂರು ರಸ್ತೆಯಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುವ ಸ್ಥಳಕ್ಕೆ ಹಾಸನ ಶಾಸಕ ಪ್ರೀತಮ್ ಜೆ. ಗೌಡ ಭೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಿ, ಇನ್ನು ಮುಂದೆ ಸುಂಕ ವಸೂಲಿ ಮಾಡದಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು. ದೂರದೂರಿನಿಂದ ಬಂದು ವ್ಯಾಪಾರ ಮಾಡುವ ರೈತರು ಒಂದಿಷ್ಟು ಲಾಭ ಗಳಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸಂತೆಯಲ್ಲಿ ವ್ಯಾಪಾರ-ವ್ಯವಹಾರ ಪ್ರಕ್ರಿಯೆ ಕಡಿಮೆಯಾಗಿದ್ದು, ರೈತರಿಗೆ ಸುಂಕ ನೀಡುವುದು ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ಪ್ರತಿ ಮಂಗಳವಾರ ಯಾರು ಕೂಡಾ ಸಂತೆ ಸುಂಕ ವಸೂಲಿ ಮಾಡಬಾರದು ಎಂದು ಸೂಚಿಸಿದ್ರು.

ಶಾಸಕ ಪ್ರೀತಂಗೌಡ ಸೂಚನೆ

ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ ವಿಚಾರಕ್ಕೆ ವೈಮನಸ್ಸು: ಶಾಸಕರ ನೇತೃತ್ವದಲ್ಲಿ ಸಂಧಾನ ಯಶಸ್ವಿ:
ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ನಮೂದಿಸಿಲ್ಲ ಎಂಬ ಕಾರಣಕ್ಕೆ ಕ್ರೀಡಾಕೂಟ ಸಮಾರಂಭ ನಡೆಯುವಾಗಲೇ, ಶಿಕ್ಷಕರು ಮತ್ತು ನೌಕರರ ಸಂಘದ ಪದಾಧಿಕಾರಿಗಳ ನಡುವೆ ಘರ್ಷಣೆ ನಡೆಯಿತು.

ಗುಂಪುಗಾರಿಕೆ ಮಾಡಿದ ಕೆಲವರು, ಪ್ರತಿಭಟನೆಗೆ ಮುಂದಾಗಿ ಆಯೋಜಕರ ವಿರುದ್ಧ ಘೋಷಣೆಗಳನ್ನ ಕೂಗಿದಾಗ ವೇದಿಕೆಯಲ್ಲಿದ್ದ ಶಾಸಕ ಪ್ರೀತಂ ಜೆ.ಗೌಡ, ಪ್ರತಿಭಟನಾನಿರತರ ಬಳಿಗೆ ಬಂದು ಮನವೊಲಿಸುವ ಪ್ರಯತ್ನ ಮಾಡಿದ್ರು. ಸ್ವಲ್ಪ ಕಾಲ ತಣ್ಣಗಾಗದ ಪ್ರತಿಭಟನಾಕಾರರನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ್ರು ಬಹಿರಂಗವಾಗಿ ಕ್ಷಮೆ ಕೇಳಿದ ಹಿನ್ನೆಲೆ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಕೈಬಿಡಲು ನಿರ್ಧಾರ ಮಾಡಿದ್ರು.

ನೌಕರರ ಕ್ರೀಡಾಕೂಟ

ಇದೇ ವೇಳೆ ಕೆಲಸದ ಜೊತೆ ಜೊತೆಯಲ್ಲಿ ಆರೋಗ್ಯದ ಕಡೆಯೂ ಹೆಚ್ಚು ಗಮನ ಕೊಡಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.

ಶಾಸಕ ಪ್ರೀತಮ್ ಜೆ. ಗೌಡ ಮಾತನಾಡಿ, ಪ್ರತಿದಿನ ಕೆಲ ಸಮಯವನ್ನು ಕ್ರೀಡೆ ಮತ್ತು ಯೋಗಕ್ಕೆ ಮೀಸಲಿಟ್ಟರೇ ಆ ದಿನ ಉತ್ಸಾಹದಿಂದ ಕೆಲಸ ನಿರ್ವಹಿಸಬಹುದು. ಸರ್ಕಾರಿ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದ್ರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಹಿಮ್ಸ್ ನಿರ್ದೇಶಕ ಡಾ. ಬಿ.ಸಿ. ರವಿಕುಮಾರ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಕೆ. ರುದ್ರಪ್ಪ, ಇತರರು ಪಾಲ್ಗೊಂಡಿದ್ದರು.

ABOUT THE AUTHOR

...view details