ಆಲೂರು: ಮಂಗಳೂರಿನಿಂದ ಹಾಸನಕ್ಕೆ ಮೆಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಸುಮಾರು 19 ಸಾವಿರ ಲೀಟರ್ ಮೆಥೆನಾಲ್ ಮಣ್ಣುಪಾಲಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಪಾಳ್ಯ ಸಮೀಪ ನಡೆದಿದೆ.
ಮೆಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ: ಅನಾಹುತ ಲೆಕ್ಕಿಸದೇ ಬಕೆಟ್ನಲ್ಲಿ ತುಂಬಲು ಮುಂದಾದ ಜನ! - ರಾಷ್ಟ್ರೀಯ ಹೆದ್ದಾರಿ 75ರ ಪಾಳ್ಯ
ಟ್ಯಾಂಕರ್ನಿಂದ ಮಳೆ ನೀರಿನಂತೆ ಸೋರಿಕೆಯಾಗುತ್ತಿದ್ದ ಮೆಥೆನಾಲ್‌ನ ಬೆಂಕಿ ಅವಘಡ ಸಂಭವವನ್ನು ಅರಿಯದೆ ಸ್ಥಳೀಯರು ಅದನ್ನ ತುಂಬಿಕೊಳ್ಳಲು ಬಕೆಟ್ ಹಿಡಿದು ಬಂದ ಘಟನೆಯೂ ನಡೆಯಿತು. ಇದರಿಂದಾಗಿ ಕೆಲ ಕಾಲ ಹೆದ್ದಾರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮೆಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ, ತಪ್ಪಿದ ಅನಾಹುತ...
ಈ ವೇಳೆ ಟ್ಯಾಂಕರ್ನಿಂದ ಮಳೆ ನೀರಿನಂತೆ ಸೋರಿಕೆಯಾಗುತ್ತಿದ್ದ ಮೆಥೆನಾಲ್‌ನ ಬೆಂಕಿ ಅವಘಡ ಸಂಭವವನ್ನು ಅರಿಯದೆ ಸ್ಥಳೀಯರು ಅದನ್ನ ತುಂಬಿಕೊಳ್ಳಲು ಬಕೆಟ್ ಹಿಡಿದು ಬಂದ ಘಟನೆಯೂ ನಡೆಯಿತು. ಇದರಿಂದಾಗಿ ಕೆಲ ಕಾಲ ಹೆದ್ದಾರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಬಳಿಕ ಅಗ್ನಿಶಾಮಕ ಮತ್ತು ಆಲೂರು ಪೊಲೀಸರು ಸ್ಥಳಕ್ಕೆ ತೆರಳಿ ಅಗ್ನಿ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಿ ರಸ್ತೆಯಲ್ಲಿ ಹರಿಯುತ್ತಿದ್ದ ಮೆಥೆನಾಲ್‌ನ್ನು ಚರಂಡಿಗೆ ಹರಿಯುವಂತೆ ಮಾಡಿದರು.
Last Updated : Oct 23, 2020, 5:26 PM IST