ಕರ್ನಾಟಕ

karnataka

ETV Bharat / state

ಎಂಸಿಇ ಹಾಸ್ಟೆಲ್​ ಸಿಬ್ಬಂದಿ ಏಕಾಏಕಿ ಅಮಾನತು: ಧರಣಿ

ಕಳೆದ ಹಲವಾರು ವರ್ಷಗಳಿಂದ ನಾವು ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿನ ಆಡಳಿತಾಧಿಕಾರಿಗಳು, ಸೂಪರ್ ವೈಸರ್ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ನೋಟಿಸ್ ನೀಡಿದ್ದಾರೆ. ಕಳೆದ 16 ವರ್ಷಗಳ ಹಿಂದೆಯೂ ನಮಗೆ ಇದೇ ರೀತಿ ನೋಟಿಸ್ ನೀಡಲಾಗಿತ್ತು ಎಂದರು.

Suspension  of MCE hostel staff
ಎಂಸಿಇ ಹಾಸ್ಟೆಲ್​ ಸಿಬ್ಬಂದಿ ಏಕಾಏಕಿ ಅಮಾನತು

By

Published : May 13, 2020, 3:21 PM IST

ಹಾಸನ: ಸರಿಯಾದ ಕಾರಣ ಇಲ್ಲದೆ ನೋಟಿಸ್ ನೀಡಿ ಏಕಾಏಕಿ​ ಕೆಲಸದಿಂದ ಹೊರ ಹಾಕಿದ ಹಿನ್ನೆಲೆ ಮಲೆನಾಡು ತಾಂತ್ರಿಕ ಕಾಲೇಜು ಸಿಬ್ಬಂದಿ ಮಹಿಳಾ ವಿದ್ಯಾರ್ಥಿ ನಿಲಯದ ಗೇಟಿನ ಮುಂದೆ ಕುಳಿತು ಧರಣಿ‌ ನಡೆಸಿದ್ದಾರೆ. ​ ​

ನಗರದ ವಿದ್ಯಾನಗರ ಬಳಿ ಇರುವ ಮಲೆನಾಡು ತಾಂತ್ರಿಕ ಕಾಲೇಜು ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಕಳೆದ 15 ರಿಂದ 20 ವರ್ಷಗಳಿಂದಲೂ ಇವರು ಕೆಲಸ ಮಾಡುತ್ತಿದ್ದು, ಎಂದಿನಂತೆ ಕಾರ್ಯನಿರ್ವಹಿಸಲು ತಮ್ಮ ಮನೆಯಿಂದ ಹಾಸ್ಟೆಲ್​ ಬಳಿ ಬಂದಾಗ ಇವರನ್ನು ಕೆಲಸದಿಂದ ತೆಗೆದುಹಾಕಲಾಗಿರುವ ಮಾಹಿತಿ ತಿಳಿದುಬಂದಿದೆ.

ಎಂಸಿಇ ಹಾಸ್ಟೆಲ್​ ಸಿಬ್ಬಂದಿ ಏಕಾಏಕಿ ಅಮಾನತು

ಸುದ್ದಿಗಾರರೊಂದಿಗೆ ಮಾತನಾಡಿದ ಕೆಲಸ ವಂಚಿತರು, ಕಳೆದ ಹಲವಾರು ವರ್ಷಗಳಿಂದ ನಾವು ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿನ ಆಡಳಿತಾಧಿಕಾರಿಗಳು, ಸೂಪರ್ ವೈಸರ್ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ನೋಟಿಸ್ ನೀಡಿದ್ದಾರೆ. ಕಳೆದ 16 ವರ್ಷಗಳ ಹಿಂದೆಯೂ ನಮಗೆ ಇದೇ ರೀತಿ ನೋಟಿಸ್ ನೀಡಲಾಗಿತ್ತು ಎಂದರು.

ಎಂಸಿಇ ಕಾಲೇಜು ಮಹಿಳಾ ವಿದ್ಯಾರ್ಥಿ ನಿಲಯದ ಆಡಳಿತಾಧಿಕಾರಿ ಶ್ರೀನಿವಾಸ್ ಮತ್ತು ಸೂಪರ್ ವೈಸರ್ ಕವಿತಾ ಎಂಬುವರು ನಮಗೆ ತೊಂದರೆ ನೀಡುತ್ತಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details