ಹಾಸನ: ಅನುಮಾನಾಸ್ಪದವಾಗಿ ಹೆಣ್ಣಾನೆ ಸಾವಿಗೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅದು ಸಹಜ ಸಾವಲ್ಲ ಆನೆಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಅನುಮಾನಾಸ್ಪದವಾಗಿ ಹೆಣ್ಣಾನೆ ಸಾವು ಪ್ರಕರಣ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಿಸಿಲೆ ಘಾಟ್ ಸಮೀಪದ ಆನೆಗುಂಡಿ ಬಳಿ ಹೆಣ್ಣಾನೆ ಸಾವಿಗೀಡಾಗಿತ್ತು. ಇದು ಸಹಜ ಸಾವಲ್ಲ, ಆನೆಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ಸಾವಿಗೀಡಾದ ಹೆಣ್ಣಾನೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ, ದೇಹದಲ್ಲಿ ಗುಂಡು ಪತ್ತೆಯಾಗಿದೆ. ದೇಹದಿಂದ ಗುಂಡನ್ನು ಹೊರತೆಗೆದು ಹೆಚ್ಚಿನ ತನಿಖೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಓದಿ:ಆನೆಗುಂಡಿ ಬಳಿ ಕಾಲುವೆಯಲ್ಲಿ ಬಿದ್ದು ಹೆಣ್ಣಾನೆ ಅನುಮಾನಾಸ್ಪದ ಸಾವು
ಇದು ವಾರದ ಹಿಂದೆ ನಡೆದ ಪ್ರಕರಣ ಅಲ್ಲ. ಬದಲಿಗೆ ಇದು ನಿನ್ನೆ ನಡೆದಿರುವಂತಹ ದುಷ್ಕೃತ್ಯ. ಕೃತ್ಯ ಎಸಗಿರುವ ಆರೋಪಿಗಳನ್ನು ಪತ್ತೆಹಚ್ಚಲು ಈಗಾಗಲೇ ಅರಣ್ಯ ಅಧಿಕಾರಿಗಳು ವಿಶೇಷ ತಂಡವನ್ನು ರಚನೆ ಮಾಡಿದ್ದು, ಮೇಲಧಿಕಾರಿಗಳ ಆದೇಶದಂತೆ ಮೃತಪಟ್ಟ ಆನೆಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.