ಹಾಸನ:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮೊಮ್ಮಗ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದೆ. ಲೋಕಸಭಾ ಚುನಾವಣೆಯಲ್ಲಿ ತಪ್ಪು ಆಸ್ತಿ ವಿವರ ದಾಖಲೆ ನೀಡಿದ ಆರೋಪದಡಿ ತನಿಖೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಪ್ರಜ್ವಲ್ ರೇವಣ್ಣ 23ನೇ ವಯಸ್ಸಿನಲ್ಲಿಯೇ 23 ಕೋಟಿ ಆಸ್ತಿಯನ್ನು ಹೇಗೆ ಸಂಪಾದಿಸಿದರು ಎಂದು ಪ್ರಶ್ನಿಸಿ ವಕೀಲ ದೇವರಾಜೇಗೌಡ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಪ್ರಜ್ವಲ್ ರೇವಣ್ಣ ವಿರುದ್ದ ಬೇನಾಮಿ ಆಸ್ತಿ ಮತ್ತು ಗೋಮಾಳ ಕಬಳಿಕೆ ಆರೋಪ ಮಾಡಿದ್ದರು. ಈ ದೂರು ದಾಖಲಾಗಿ ಮೂರು ವರ್ಷದ ನಂತರ ಈಗ ಆಸ್ತಿ ವಿವರದ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.