ಹಾಸನ: ರಾಜ್ಯದಾದ್ಯಂತ ನಡೆದ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ಆನ್ಲೈನ್ ಚಳವಳಿಯಲ್ಲಿ ಜಿಲ್ಲೆಯ ಉಪನ್ಯಾಸಕರು ಕೂಡ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರವು ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ಸೇವಾ ಭದ್ರತೆ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು.
ಹಾಸನದಲ್ಲೂ ಅತಿಥಿ ಉಪನ್ಯಾಸಕರ ಆನ್ಲೈನ್ ಪ್ರತಿಭಟನೆಗೆ ಬೆಂಬಲ ಅತಿಥಿ ಉಪನ್ಯಾಸಕಿ ಸುಮಾ ಈ ಕುರಿತು ಮಾತನಾಡಿ, ಇಂದು ಕರ್ನಾಟಕ ರಾಜ್ಯದಲ್ಲಿರುವ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಬರುವ ಸಂಬಳ ಮೊದಲೆ ಕಡಿಮೆಯಾಗಿದ್ದು, ಕೆಲಸ ಮಾಡಿದ ಸಂಬಳ ಕೊಡ 7-10 ತಿಂಗಳು ನಿಲ್ಲಿಸಿದ್ದಾರೆ. ತಮ್ಮ ವೃತ್ತಿಯನ್ನೇ ನಂಬಿರುವ ಅತಿಥಿ ಉಪನ್ಯಾಸಕರುಗಳಿಗೆ ಸಂಬಳ ಕೊಡದಿದ್ದರೆ ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಆನ್ಲೈನ್ ಮೂಲಕ ಇಡೀ ರಾಜ್ಯದಲ್ಲಿ ನಮ್ಮ ಬೇಡಿಕೆ ಸರ್ಕಾರಕ್ಕೆ ಹೇಳುವ ಪ್ರಯತ್ನ ಮಾಡಿದ್ದು, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಸೇವಾ ಭದ್ರತೆ ಈಡೇರಿಸುವ ನಿಟ್ಟಿನಲ್ಲಿ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.