ಹಾಸನ:ತೀವ್ರ ಮಳೆಯಿಂದ ಹಾನಿಯಾಗಿ ಮನೆ ಕಳೆದುಕೊಂಡಿರುವ ನೆರೆ ಸಂತ್ರಸ್ತರ ನೆರವಿಗಾಗಿ ಜಿಲ್ಲೆಯ ಎಪಿಎಂಸಿ ಸಗಟು ತರಕಾರಿ ವರ್ತಕರು ಹಾಗೂ ಕಟ್ಟಿನಕೆರೆ ಮಾರ್ಕೆಟ್ ವರ್ತಕರ ಸಂಘದ ವತಿಯಿಂದ ಸಂಗ್ರಹಿಸಿದ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ದಿನನಿತ್ಯ ಬಳಸುವ ಪದಾರ್ಥಗಳನ್ನು ವಾಹನದ ಮೂಲಕ ಬಾಗಲಕೋಟೆಗೆ ಕಳುಹಿಸಲಾಯಿತು.
ಬಾಗಲಕೋಟೆ ನೆರೆ ಸಂತ್ರಸ್ತರ ನೆರವಿಗಾಗಿ ಅಗತ್ಯ ವಸ್ತುಗಳ ಪೂರೈಕೆ - ನೆರೆ ಸಂತ್ರಸ್ತರ ನೆರವಿಗಾಗಿ
ಅವಶ್ಯಕವಾಗಿ ಬೇಕಾಗಿರುವ ದಿನನಿತ್ಯ ಬಳಸುವ ದಿನಸಿ ಪದಾರ್ಥ, ತರಕಾರಿ, ಹೊದಿಕೆ, ಬಿಸ್ಕತ್ ಇತರೆ ಅಗತ್ಯ ವಸ್ತುಗಳನ್ನು 50 ಚೀಲಗಳಲ್ಲಿ ಪ್ಯಾಕ್ ಮಾಡಿ ಬಾಗಲಕೋಟೆಗೆ ಕಳುಹಿಸಲಾಯಿತು.
ಕಳೆದ ಹಲವಾರು ದಿನಗಳಿಂದ ಸುರಿದ ಭಾರೀ ಮಳೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮನೆಗಳು, ಜಮೀನಿನಲ್ಲಿ ಬೆಳೆದ ಬೆಳೆಗಳು ಕೊಚ್ಚಿಕೊಂಡು ಹೋಗಿದ್ದು, ಅಲ್ಲಿನ ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ.
ಈ ನಿಟ್ಟಿನಲ್ಲಿ ಬಾಗಲಕೋಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವುದರಿಂದ ಜನರಿಗೆ ಅವಶ್ಯಕವಾಗಿ ಬೇಕಾಗಿರುವ ದಿನನಿತ್ಯ ಬಳಸುವ ದಿನಸಿ ಪದಾರ್ಥ, ತರಕಾರಿ, ಹೊದಿಕೆ, ಬಿಸ್ಕತ್ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು 50 ಚೀಲಗಳಲ್ಲಿ ಪ್ಯಾಕ್ ಮಾಡಿ ವಾಹನದ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲೆಯ ಎಪಿಎಂಸಿ ಸಗಟು ತರಕಾರಿ ವರ್ತಕರು ಹಾಗೂ ಕಟ್ಟಿನಕೆರೆ ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ.