ಕರ್ನಾಟಕ

karnataka

ETV Bharat / state

ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.. ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿಕೆ! - ಜಿಲ್ಲೆಯ ವಿವಿಧೆಡೆ ತಾತ್ಕಾಲಿಕ ಆಶ್ರಯ ಕೇಂದ್ರ ಸ್ಥಾಪನೆ

ಪ್ರವಾಹ ಪರಿಸ್ಥಿತಿಯಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಜಿಲ್ಲೆಯ ವಿವಿಧೆಡೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ಊಟೋಪಚಾರ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷ

By

Published : Aug 11, 2019, 6:03 PM IST

Updated : Aug 11, 2019, 6:09 PM IST

ಹಾಸನ‌:ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಜಿಲ್ಲೆಯ ವಿವಿಧೆಡೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ಊಟೋಪಚಾರ, ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ಆಹಾರ ಇಲಾಖೆ‌ ಮೂಲಕ ಸಲ್ಲಿಸಿದ್ದ ಮನವಿಯ ಮೇರೆಗೆ ಮೈಸೂರಿನ ಸಿಎಫ್‌ಟಿಅರ್‌ಐನಿಂದ 5000 ನಿರಾಶ್ರಿತರಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ಪೂರೈಕೆಯಾಗಿದ್ದು, ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆಶ್ರಯ ತಾಣಗಳಿಗೆ‌ ರಾವಾನಿಸಲಾಗಿದೆ ಎಂದರು. ಸಿಎಫ್‌ಟಿಆರ್‌ಐನಿಂದ ಚಪಾತಿ, ಗೊಜ್ಜು ಹಾಗೂ ಕುಡಿಯುವ ನೀರನ್ನು ಪೂರೈಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಆಹಾರ ಪೊಟ್ಟಣಗಳನ್ನು ತೆರೆದ ಗುಣಮಟ್ಟದ ಮಾದರಿ ಪರೀಕ್ಷೆ ನಡೆಸಿ ನಂತರ ರವಾನಿಸಲಾಯಿತು.

ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ: ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷ

ಅಲ್ಲದೆ ಆಹಾರ ಮತ್ತು ನಾಗರಿಕ ಸರಬರಾಜು‌ ಇಲಾಖೆ ವತಿಯಿಂದ 5000 ವಿಶೇಷ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ 10kg ಅಕ್ಕಿ ,1ಕೆಜಿ ತೊಗರಿಬೇಳೆ,1ಕೆಜಿ ಉಪ್ಪು,1ಕೆಜಿ‌ ಸಕ್ಕರೆ, 1ಕೆಜಿ ಎಣ್ಣೆ, 5 ಲೀಟರ್ ಸೀಮೆಎಣ್ಣೆಯನ್ನೂ ಸಂತ್ರಸ್ತರ ಕುಟುಂಬಗಳಿಗೆ ವಿತರಿಸಲಾಗುತ್ತಿದೆ. ಹಾಸನ ಡೈರಿಯಿಂದಲೂ ನಿರಾಶ್ರಿತರ ಬಳಕೆಗೆ ತಕ್ಷಣಕ್ಕೆ 10,000 ಟೆಟ್ರಾ ಪ್ಯಾಕ್ ಸುವಾಸಿತ ಹಾಲು ಪೂರೈಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Last Updated : Aug 11, 2019, 6:09 PM IST

ABOUT THE AUTHOR

...view details