ಅರಕಲಗೂಡು: ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಸ್ಬಿಐ ನೌಕರ ಆತ್ಮಹತ್ಯೆ ಶರಣಾಗಿದ್ದಾರೆ.
ಅರಕಲಗೂಡಿನಲ್ಲಿ ಎಸ್ಬಿಐ ನೌಕರ ಆತ್ಮಹತ್ಯೆ - SBI Bank Cashier Suicide
ಅರಕಲಗೂಡು ಪಟ್ಟಣದಲ್ಲಿ ಎಸ್ಬಿಐ ಬ್ಯಾಂಕ್ ಕ್ಯಾಶಿಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.
ಎಸ್ಬಿಐ ನೌಕರ ಆತ್ಮಹತ್ಯೆ
ಬಿಹಾರ ಮೂಲದ ಪ್ರಕಾಶ್ ಕುಮಾರ್ ಸಿಂಗ್ ನೇಣಿಗೆ ಕೊರಳೊಡ್ಡಿದವ. ತಾಲೂಕಿನ ಕಸಬಾ ಹೋಬಳಿ ಹೆಬ್ಬಾಲೆ ಗ್ರಾಮದ ಎಸ್ಬಿಐ ಶಾಖೆಯಲ್ಲಿ ಕ್ಯಾಶಿಯರ್ ಆಗಿ ಈತ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ವ್ಯಕ್ತಿಯ ಕುಟುಂಬದವರು ಬಿಹಾರಕ್ಕೆ ತೆರಳಿದ ವೇಳೆ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಕುಟುಂಬದವರು ಕರೆ ಮಾಡಿದಾಗ ಸ್ಪಂದಿಸದ ಕಾರಣ ಸ್ಥಳೀಯ ಎಸ್ಬಿಐ ಬ್ಯಾಂಕ್ ಶಾಖೆ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ. ಈ ವೇಳೆ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.