ಕರ್ನಾಟಕ

karnataka

ETV Bharat / state

ಕೆಎಸ್​​ಆರ್​ಟಿಸಿ ಬಸ್​ ಚಾಲಕರ ವಿರುದ್ದ ವಿದ್ಯಾರ್ಥಿಗಳ ಪ್ರತಿಭಟನೆ - undefined

ಕೆ.ಎಸ್​.ಆರ್​.ಟಿ.ಸಿ. ಬಸ್​ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಹಾಗೂ ಬಸ್​ ಚಾಲಕರು ಹಣ ಮಾಡುವ ಸಲುವಾಗಿ ಬಸ್​ ನಿಲ್ದಾಣವಿದ್ದರೂ ಸಹ ಬಸ್​ಗಳನ್ನು ನಿಲ್ಲಿಸುತ್ತಿಲ್ಲ ಇದರಿಂದಾಗಿ ವಿದ್ಯಾರ್ಥಿಗಳಿಗೆ ದಿನನಿತ್ಯ ತೊಂದರೆ ಉಂಟಾಗುತ್ತಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕಡಬಗಾಲ ಕ್ರಾಸ್‌ನಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ

ಪ್ರತಿಭಟನಾ ನಿರತ ವಿದ್ಯಾರ್ಥಿಗಳು

By

Published : Jul 18, 2019, 5:28 AM IST

Updated : Jul 18, 2019, 11:31 PM IST

ಹಾಸನ: ಸುಮಾರು ಎರಡು ವರ್ಷಗಳಿಂದ ಕೆಎಸ್‌ಆರ್​​​ಟಿಸಿ ಬಸ್ ಚಾಲಕರು ಹಣ ಮಾಡುವ ಉದ್ದೇಶದಿಂದ ಆಟೋ ಮಾಲೀಕರ ಜೊತೆ ಶಾಮೀಲಾಗಿ ಸರಿಯಾಗಿ ಬಸ್‌ಗಳನ್ನು ನಿಲ್ಲಿಸದೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಇಂದು ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಆಲೂರು ತಾಲೂಕು ಕಡಬಗಾಲ ಕ್ರಾಸ್‌ನಲ್ಲಿ ಬಸ್ ನಿಲ್ಲಿಸದಿರುವುದರಿಂದ ಈ ಭಾಗದ ಕಡಬಗಾಲ, ಕೆರೆಕೊಪ್ಪಲು, ಚಟ್ಟನಹಳ್ಳಿ, ಹೊಳೆಕೊಪ್ಪಲು, ಹೊಸಪಟ್ಟಣ, ಚಿಟ್ಟನಹಳ್ಳಿ, ಆಲೂರು ಪಟ್ಟಣ ಹಾಗೂ ಹಾಸನ ನಗರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕೆಎಸ್‌ಆರ್ ಟಿಸಿ ಚಾಲಕರ ಈ ನಿರ್ಲಕ್ಷ್ಯದ ಬಗ್ಗೆ ಸಾಕಷ್ಟು ದೂರು ನೀಡಿದ್ದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ.

ಪ್ರತಿಭಟನಾ ನಿರತ ವಿದ್ಯಾರ್ಥಿಗಳು

ಹಾಸನ ಜಿಲ್ಲೆ ರಸ್ತೆ ರಾಷ್ಟ್ರೀಕರಣವಾಗಿ ದಶಕಗಳೇ ಕಳೆದಿದೆ ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಸರಿಯಾದ ಸಮಯದಲ್ಲಿ ಬಸ್ ವ್ಯವಸ್ಥೆಯನ್ನು ಕಲ್ಪಿಸದಿರುವುದು ಕೆಎಸ್ಆರ್​​ಟಿಸಿ ನಿರ್ಲಕ್ಷ ಅಂದರೆ ತಪ್ಪಾಗಲಾರದು. ರಸ್ತೆ ರಾಷ್ಟ್ರೀಕರಣ ಆಗಿರುವುದರಿಂದ ಪ್ರತಿ ಹಳ್ಳಿಗಳಿಗೂ ಕೂಡ ಸರ್ಕಾರಿ ಬಸ್ ಓಡಾಡುವಂತಹ ವ್ಯವಸ್ಥೆಯನ್ನು ಮಾಡಬೇಕು. ಆದರೆ, ಕೆಲವು ಕೆಎಸ್ಆರ್​​ಟಿಸಿ ಚಾಲಕರು ಮತ್ತು ನಿರ್ವಾಹಕರು ಖಾಸಗಿ ವಾಹನಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆ ಇದರಿಂದಾಗಿ ಸರಿಯಾದ ಸಮಯಕ್ಕೆ ಬಸ್ ಬಾರದೇ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂಬುದು ಈ ಭಾಗದ ಜನರ ಆರೋಪವಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಹಾಗೂ ಆಟೋ ಚಾಲಕರ ಹೊಂದಾಣಿಕೆ ವ್ಯವಹಾರದಿಂದ ಸಾರಿಗೆ ಬಸ್ ಖಾಲಿ ಇದ್ದರೂ ಚಾಲಕರು ನಿಲ್ಲಿಸದೇ ಉಡಾಫೆಯಿಂದ ವರ್ತಿಸುತ್ತಿರುವುದರಿಂದ ನಾವುಗಳು ಸಕಾಲಕ್ಕೆ ಕಾಲೇಜು ತಲುಪಲಾಗದೆ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸುವಂತಾಗಿದೆ. ಮನೆಯಲ್ಲಿ ದಿನಾಲು ಹಣ ಕೇಳಿದರೆ ಬಸ್ ಪಾಸ್ ಮಾಡಿಕೊಟ್ಟಿದ್ದೇಕೆ? ಹಣ ಯಾಕೆ ಅಂತ ಕೇಳುತ್ತಾರೆ. ನಾವು ಏನು ಅಂತ ಹೇಳೋದು ಎಂಬ ಅಳಲು ವಿದ್ಯಾರ್ಥಿಗಳದ್ದು. ವಿದ್ಯಾರ್ಥಿಗಳು ಸರ್ಕಾರಕ್ಕೆ ಹಣ ನೀಡಿ ಬಸ್ ಪಾಸ್ ಪಡೆದು ಕೊಂಡಿರುತ್ತಾರೆ. ಆದರೆ ಚಾಲಕರು ಬಸ್ ನಿಲ್ಲಿಸದೇ ಇರುವುದರಿಂದ ಪ್ರತಿನಿತ್ಯ ಹಣವನ್ನು ನೀಡಿ ಖಾಸಗಿ ವಾಹನಗಳಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ನಮ್ಮ ಪೋಷಕರು ಕೂಲಿ ಮಾಡಿ ಜೀವನ ಸಾಗಿಸುವುದೇ ದುಸ್ತರವಾಗಿರುವ ಇಂತಹ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರು ಅನಗತ್ಯ ತೊಂದರೆ ನೀಡುತ್ತಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳು ತಪ್ಪಿತಸ್ಥ ಚಾಲಕರ ಮೇಲೆ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

Last Updated : Jul 18, 2019, 11:31 PM IST

For All Latest Updates

TAGGED:

ABOUT THE AUTHOR

...view details