ಹಾಸನ: ತರಗತಿಯಲ್ಲಿ ಕುಳಿತು ಪಾಠ ಕೇಳಬೇಕಿದ್ದ ವಿದ್ಯಾರ್ಥಿಗಳು, ಇಂದು ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ಮಾಡೋಕೆ ತಮ್ಮ ಪೋಷಕರುಗಳನ್ನೇ ಕರೆಯುತ್ತಾ ಇದ್ರು. ಹೀಗೆ ವ್ಯಾಪಾರ ಮಾಡ್ತಿರೋರು ಆಲೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಕ್ಷೇತ್ರ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮೆಟ್ರಿಕ್ ಮೇಳ ಮತ್ತು ಮಕ್ಕಳ ಸಂತೆ ಕಾರ್ಯಕ್ರಮದ ನಿಮಿತ್ತ ಈ ಹುಡುಗ್ರು ವ್ಯಾಪಾರದಲ್ಲಿ ತಲ್ಲಿನರಾಗಿದ್ರು.
ಇಂದಿನ ಮಕ್ಕಳಿಗೆ ಅಂತರ್ಜಾಲ ಮಾರುಕಟ್ಟೆ ಬಂದ ಬಳಿಕ ಗ್ರಾಮೀಣಾ ಭಾಗದ ವ್ಯಾಪಾರ-ವ್ಯಹಹಾರ-ಸಂತೆಗಳ ಕಾರ್ಯಚಟುವಟಿಕೆಗಳು ಮರೆಯಾಗುತ್ತಿವೆ. ಅದನ್ನ ಮಕ್ಕಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸಂತೆಯನ್ನ ಏರ್ಪಡಿಸಲಾಗಿತ್ತು. ಮಕ್ಕಳಿಂದಲೇ ವ್ಯಾಪಾರ-ವಹಿವಾಟು ಮಾಡಿಸುವ ಮೂಲಕ ಅರಿವು ಮೂಡಿಸಲಾಯ್ತು.
ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸಂತೆ 5-8ನೇ ತರಗತಿಯ ಮಕ್ಕಳುಗಳು ತಾವು ಮನೆಯಿಂದ ತಂದಿದ್ದ ಬೇಳೆಕಾಳು, ತರಕಾರಿ, ಬಟ್ಟೆ, ಪಾತ್ರೆ, ಆಟಿಕೆ, ಅಡುಗೆ ಮಾಡುವ ದಿನಬಳಕೆ ಸಾಮಗ್ರಿಗಳು, ಸೀರೆ, ತೆಂಗಿನಕಾಯಿ, ಗ್ರಾಮೀಣ ಭಾಗದಿಂದ ತಂದಿರುವ ಗೆಡ್ಡೆ-ಗೆಣಸುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿ ವ್ಯವಹಾರಿಕ ಅನುಭವ ಪಡೆಯುವುದಷ್ಟೆ ಅಲ್ಲದೇ ವ್ಯಾಪಾರದಲ್ಲಿಯೂ ಸೈ- ಓದಿನಲ್ಲೂ ಸೈ ಎನಿಸಿಕೊಂಡರು.
ತಾಲೂಕು ಶಿಕ್ಷಣ ಜಿಲ್ಲಾ ಸಂಯೋಜಕ ರವಿಕುಮಾರ್ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ ಬೆಳೆಸುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಚಿನ ಕಾಲದಲ್ಲಿ ವಸ್ತುಗಳನ್ನ ಕೊಡು-ಕೊಳ್ಳುವಿಕೆ ಇದ್ದು, ಬಳಿಕ ಹಣದ ಚಲಾವಣೆ ಬಳಕೆಗೆ ಬಂದಿದೆ. ಅದೇ ರೀತಿ ಗ್ರಾಮೀಣಾ ಭಾಗದದಲ್ಲಿ ಹಿಂದೆ ಜಮೀನನ್ನ ಗುತ್ತಿಗೆ ಮಾಡಿಕೊಳ್ಳುತ್ತಿದ್ದರು. ಧವಸವನ್ನ ಹಂಚಿಕೆ ಮಾಡಿಕೊಳ್ಳುವಾಗ ಕೊಳಗದಲ್ಲಿ ತೂಕ ಮಾಡಿ ಒಂದು ಪಲ್ಲ, 2 ಪಲ್ಲ ಎಂದು ಕೊಡುವ ವ್ಯವಸ್ಥೆ ಇತ್ತು. ಆದ್ರೆ ಅದು ಕೂಡಾ ಬದಲಾಗಿದ್ದು, ಕಿಲೋಗೆ ಬಂದಿದೆ. ಅಂತಹುಗಳನ್ನೆಲ್ಲಾ ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಉತ್ತಮ ಕಾರ್ಯಕ್ರಮ ಇದಾಗಿದೆ ಎಂದ್ರು.