ಹಾಸನ: ಸಿಡಿಲು ಬಡಿದು ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ನುಗ್ಗೆಹಳ್ಳಿ ಹೊಬಳಿಯಲ್ಲಿ ನಡೆದಿದೆ. ಪ್ರಥಮ ಪಿಯುಸಿ ಓದುತ್ತಿದ್ದ ದರ್ಶನ್ (18) ಹಾಗೂ ಟ್ರ್ಯಾಕ್ಟರ್ ಚಾಲಕ ಉದಯಕುಮಾರ್(28) ಮೃತರು. ದರ್ಶನ್ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಸಾವಿಗೀಡಾಗಿದ್ದಾನೆ.
ಹಾಸನದಲ್ಲಿ ಸಿಡಿಲು ಬಡಿದು ವಿದ್ಯಾರ್ಥಿ, ಚಾಲಕ ಸಾವು
ಭಾರಿ ಮಳೆಯಾಗುತ್ತಿದ್ದ ಪರಿಣಾಮ ರಕ್ಷಣೆಗಾಗಿ ನುಗ್ಗೆಹಳ್ಳಿ ಹಿರಿಸಾವೆ ಮಾರ್ಗದ ಬಸವನಹಳ್ಳಿಯ ಬಸ್ ನಿಲ್ದಾಣದ ಸಮೀಪ ಇಬ್ಬರು ನಿಂತಿದ್ದರು. ಇದೇ ವೇಳೆ ಸಿಡಿಲು ಬಡಿದಿದೆ.
ಜೋರು ಮಳೆಯಾಗುತ್ತಿದ್ದ ವೇಳೆ ರಕ್ಷಣೆಗಾಗಿ ನುಗ್ಗೆಹಳ್ಳಿ ಹಿರಿಸಾವೆ ಮಾರ್ಗದ ಬಸವನಹಳ್ಳಿಯ ಬಸ್ ನಿಲ್ದಾಣದ ಸಮೀಪ ಇವರಿಬ್ಬರು ನಿಂತಿದ್ದರು. ಇದೇ ವೇಳೆ ಚಾಲಕ ಹಾಗೂ ವಿದ್ಯಾರ್ಥಿ ಮೇಲೆ ಸಿಡಿಲು ಬಡಿದಿದೆ. ಸ್ಥಳಕ್ಕೆ ಹೊಳೆನರಸೀಪುರ ಡಿವೈಎಸ್ಪಿ ಮುರುಳೀಧರ್, ವೃತ್ತ ನಿರೀಕ್ಷಕಿ ಭಾನು ಸುನಿಲ್, ಹಿರಿಸಾವೆ ಪಿಎಸ್ಐ ಶ್ರೀನಿವಾಸ್ ಸ್ಥಳ ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಿರಿಸಾವೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನೋಡಿ: ಈ ರೆಸ್ಟೋರೆಂಟ್ನಲ್ಲಿ ರೈಲಲ್ಲಿ ಬರುತ್ತೆ ಡೈನಿಂಗ್ ಟೇಬಲ್ಗೆ ಫುಡ್!