ಸಕಲೇಶಪುರ: ಲಾಕ್‌ಡೌನ್ ಹಿನ್ನೆಲೆ ಕಳೆದ 5 ದಿನಗಳಿಂದ ತುಸು ವಿನಾಯತಿ ನೀಡಲಾಗಿದೆ. ಸೋಮವಾರದಿಂದ ಲಾಕ್‌ಡೌನ್ ಬಿಗಿ ಮಾಡಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ.
ಲಾಕ್‌ಡೌನ್ ಕ್ರಮಗಳನ್ನು ಬಿಗಿ ಮಾಡಲು ಮುಂದಾದ ತಾಲೂಕು ಆಡಳಿತ.. ವಿನಾಕಾರಣ ಕೆಲವರ ಸುತ್ತಾಡುತ್ತಿದ್ದಾರೆ. ಇಂದಿನಿಂದ ಮತ್ತಷ್ಟು ಬಿಗಿ ಮಾಡಲು ಯೋಜಿಸಿದೆ. ಪಟ್ಟಣದ ಬಿಎಂರಸ್ತೆ, ಆರ್ ಬಿ ಸ್ಟೀಲ್ ಹಾಗೂ ಚಂಪಕನಗರ ಟೋಲ್‌ಗೇಟ್ ಬಳಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ನಿಗದಿತ ಸಮಯದಲ್ಲಿ ಮಾತ್ರ ಪಟ್ಟಣಕ್ಕೆ ಪ್ರವೇಶ ನೀಡಬೇಕು. ಅಗತ್ಯ ವಸ್ತುಗಳನ್ನು ಆಗಲೇ ಖರೀದಿ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಸೂಚಿಸಿದೆ.
ಬಾಕಿ ಸಮಯದಲ್ಲಿ ಪಟ್ಟಣ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳ ಆದೇಶದಂತೆ ‘ಭಾನುವಾರ, ಮಂಗಳವಾರ, ಗುರುವಾರ, ಶನಿವಾರದಂದು ಬೆಳಿಗ್ಗೆ 7ರಿಂದ ಮಧ್ಯಾಹ್ನ 12ಗಂಟೆವರೆಗೆ ಹಾಲು, ದಿನಪತ್ರಿಕೆ, ತರಕಾರಿ, ಹಣ್ಣು ಹಾಗೂ ದಿನಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6ರಿಂದ 8 ಗಂಟೆವರೆಗೆ ಮಾತ್ರ ಹಾಲು ಮತ್ತು ದಿನಪತ್ರಿಕೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ದಿನಗಳಲ್ಲಿ ದಿನಸಿ ವಸ್ತುಗಳ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಆರೋಗ್ಯ ಸೇವೆಗಳಿಗೆ ಮಾತ್ರ ನಿತ್ಯ ಅವಕಾಶವಿರುತ್ತದೆ ಎಂದು ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದೆ.