ಹಾಸನ:ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡ್ರೀಮ್ ಸ್ಟುಡಿಯೋ ಎಂಟರ್ಟೈನ್ನ್ಮೆಂಟ್ನಿಂದ ಇಂಗ್ಲಿಷ್ ಹಾಡೊಂದನ್ನು ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹಾಡಿನ ಸಾಹಿತ್ಯಗಾರ ಶಕೀಲ್ ಅಹಮದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಬಗ್ಗೆ ಭಯಪಡಬಾರದು ಎಂದು ಜನರಲ್ಲಿ ಮಾನಸಿಕ ಧೈರ್ಯ ತುಂಬಲು ಸ್ಟೇ ಅಟ್ ಹೋಂ ಎಂಬ ಶೀರ್ಷಿಕೆಯಡಿ ಹಾಡನ್ನು ರಚಿಸಲಾಗಿದೆ. ನಾನು ಸಂಗೀತ ಸಂಯೋಜಕನಾಗಿ ಬಲ್ಲೇರಿಯಾದ ಮಾರ್ಟಿನ್ ಐವನೋವ ಅವರೊಂದಿಗೆ ಹಾಡಿಗೆ ಧ್ವನಿಯಾಗಿರುವುದಾಗಿ ಹೇಳಿದರು.
ಈ ಹಾಡನ್ನು ಕೊರೊನಾ ವಾರಿಯರ್ಸ್ ಅರ್ಪಿಸಿದ್ದೇವೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಶಶಾಂಕ್ ಶಶು, ಡಿಓಪಿ ಮತ್ತು ಕಲರ್ ಗ್ರೇಡಿಂಗ್ ಅನ್ನು ಎಂ.ಆರ್.ಶರತ್, ಪ್ರಚಾರ ಮತ್ತು ಕಲೆ ಎನ್.ಸುಹಾಸ್, ಸಂಕಲವನ್ನು ಅರ್ಷದ್ ಅಹಮದ್, ತೋಫಿಕ್ ಅಹಮದ್ ಅವರ ಶ್ರಮ ಈ ಹಾಡಿನ ರಚನೆಗಿದೆ ಎಂದರು.
ಇದಕ್ಕೂ ಮೊದಲು ರಚಿಸಿದ ಹಾಡುಗಳು
ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಸಂಗೀತ, ದೇಶ ಭಕ್ತಿಗೀತೆ ಐ ಆಮ್ ಇಂಡಿಯನ್, ತುಮ್ ಜಿಹಾನ್ ಭೀ ರಾಹೋ ಹಾಡುಗಳು ಮತ್ತು ಕ್ರಿಸ್ಮಸ್ ಪ್ರಯುಕ್ತ ಓ ಮೇರಿಯ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದೇವೆ. ಆದರೆ, ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಎಂದರು.