ಕರ್ನಾಟಕ

karnataka

ETV Bharat / state

ಸಂವಿಧಾನದ ಜಾಗೃತಿ ಅಭಿಯಾನದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ:ಎಂ.ಎಸ್. ಯೋಗೇಶ್ - ಸಂವಿಧಾನದ ಜಾಗೃತಿ ಅಭಿಯಾನದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಸಂವಿಧಾನದ ಜಾಗೃತಿ ಅಭಿಯಾನದ ಅಂಗವಾಗಿ ಡಿ. 27 ರಿಂದ 2020 ರ ಜನವರಿ 26 ರ ವರೆಗೂ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿರುವುದಾಗಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಜಿಲ್ಲಾ ಸಂಯೋಜಕ ಎಂ.ಎಸ್. ಯೋಗೇಶ್ ತಿಳಿಸಿದ್ದಾರೆ.

yogesh
ಎಂ.ಎಸ್. ಯೋಗೇಶ್

By

Published : Dec 27, 2019, 9:40 AM IST

ಹಾಸನ: ಸಂವಿಧಾನದ ಜಾಗೃತಿ ಅಭಿಯಾನದ ಅಂಗವಾಗಿ ಡಿ. 27 ರಿಂದ 2020 ರ ಜನವರಿ 26 ರ ವರೆಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿರುವುದಾಗಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಜಿಲ್ಲಾ ಸಂಯೋಜಕ ಎಂ.ಎಸ್. ಯೋಗೇಶ್ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಪ್ರಬಂಧದ ವಿಷಯ 'ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಪಾತ್ರ' ಕುರಿತು ನಡೆಯಲಿದೆ ಎಂದರು.

ಎಂ.ಎಸ್. ಯೋಗೇಶ್

ಪ್ರಥಮ ಬಹುಮಾನವಾಗಿ 1 ಲಕ್ಷ, ದ್ವಿತೀಯ ಬಹುಮಾನವಾಗಿ 50 ಸಾವಿರ, ತೃತೀಯ ಬಹುಮಾನವಾಗಿ 25 ಸಾವಿರ ರೂ ಗಳು. ಸಮಾಧಾನಕರ ಬಹುಮಾನವಾಗಿ 10 ಜನರಿಗೆ 5 ಸಾವಿರ ರೂ ಗಳಂತೆ ನೀಡಲಾಗುವುದು. ಪದವಿಪೂರ್ವ ಕಾಲೇಜು, ತತ್ಸಮಾನ ಕೋರ್ಸ್‌ಗಳ ಪ್ರಬಂಧದ ವಿಷಯ 'ಭಾರತ ಸಂವಿಧಾನ ಪ್ರಸ್ತಾವನೆಯ ಮಹತ್ವ' ಕುರಿತ ವಿಚಾರವಾಗಿದ್ದು, ಪ್ರಥಮ ಸ್ಥಾನಕ್ಕೆ ಬಹುಮಾನ 50 ಸಾವಿರ, ದ್ವಿತೀಯ ಸ್ಥಾನಕ್ಕೆ 25 ಸಾವಿರ, ತೃತೀಯ ಸ್ಥಾನಕ್ಕೆ 15 ಸಾವಿರ ಹಾಗೂ ಸಮಾಧಾನಕರ ಬಹುಮಾನವನ್ನು 10 ಜನರಿಗೆ 3 ಸಾವಿರದಂತೆ ಕೊಡಲಾಗುವುದು ಎಂದು ತಿಳಿಸಿದರು.

ಇನ್ನು, ಪ್ರೌಢಶಾಲಾ ವಿಭಾಗದ ಪ್ರಬಂಧದಲ್ಲಿ 'ಭಾರತ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಪಾತ್ರ' ಕುರಿತು ಬರೆಯಬೇಕು. ಪ್ರಥಮ ಬಹುಮಾನವಾಗಿ 25 ಸಾವಿರ, ದ್ವಿತೀಯ ಸ್ಥಾನವಾಗಿ 15 ಸಾವಿರ, ತೃತೀಯ ಬಹುಮಾನವಾಗಿ 5 ಸಾವಿರ ಹಾಗೂ ಸಮಾಧಾನಕರ ಬಹುಮಾನವಾಗಿ 10 ಜನರಿಗೆ 2 ಸಾವಿರ ರೂ.ಗಳಂತೆ ಕೊಡಲಾಗುವುದು ಎಂದು ಕಾರ್ಯಕ್ರಮದ ವಿವರ ನೀಡಿದರು.

ಪ್ರಬಂಧ ಸ್ಪರ್ಧೆಯ ನಿಬಂಧನೆಗಳು ಮತ್ತು ಸೂಚನೆಗಳ ಬಗ್ಗೆ ಹೆಚ್ಚಿನ ವಿವರ ಪಡೆಯಲು ಮೊ. 9945771969, 9740362050, 8217331479ಹಾಗೂ 8095691979 ಗೆ ಸಂಪರ್ಕಿಸಲು ಕೋರಲಾಗಿದೆ.

ABOUT THE AUTHOR

...view details