ಹಾಸನ: ಪ್ರಸಕ್ತ ಮುಂಗಾರಿನಲ್ಲಿ ಬಿತ್ತನೆಗೆ ಆಲೂಗಡ್ಡೆ ಬಿತ್ತನೆ ಬೀಜ ಅಗತ್ಯ ಪ್ರಮಾಣದಷ್ಟು ದಾಸ್ತಾನು ಮಾಡಲಾಗಿದೆ. ಜೊತೆಗೆ ಕೃಷಿಗೆ ಬೇಕಾಗಿರುವ ರಸಗೊಬ್ಬರ ಶೇ. 90 ರಷ್ಟಿದೆ ಬಾಕಿ ಶೇ.10 ರಷ್ಟು ಹೊರ ರಾಜ್ಯದಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ಮಾತನಾಡಿದ ಅವರು, ಕೃಷಿ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಅಡಚಣೆ ಇಲ್ಲ. ಯಾರಾದರು ಅಡ್ಡಿಪಡಿಸಿದರೆ ಅದನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದರು.
ಜಿಲ್ಲೆಗೆ ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇದ್ದು ಈ ಬಗ್ಗೆ ಶಾಸಕರು ಮನವಿ ಮಾಡಿದ್ದಾರೆ. ಅದರಂತೆ ಸೂಕ್ತ ಜಾಗ ಗುರುತಿಸಿದ್ದರೆ ರೈತರಿಗೆ ಸಹಾಯವಾಗುವಂತೆ ಎಪಿಎಂಸಿ ಯಲ್ಲಿ ಶೈಥ್ಯಾಗಾರ ಸೌಲಭ್ಯ ಮಾಡಿಸಿಕೊಡಲಾಗುತ್ತದೆ ಎಂದರು.