ಹಾಸನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೋನ್-ಇನ್ ಲೈವ್ ಕಾರ್ಯಕ್ರಮದಲ್ಲಿ ಎಸ್ಪಿ ಶ್ರೀನಿವಾಸ್ ಗೌಡರು ದೂರುಗಳಿಗೆ ಸ್ಪಂದಿಸಿದರು.
ಪೋನ್-ಇನ್ ಲೈವ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಎಸ್ಪಿ ಶ್ರೀನಿವಾಸ್ ಗೌಡ.. - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಸನ
ಎಲ್ಲಾ ಸಮಸ್ಯೆಗಳ ಬಗ್ಗೆ ಗಮನ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಂಡ ನಂತರ ಕರೆ ಮಾಡಿ ತಿಳಿಸಿದ ಅವರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿವೆ. ಈ ಬಗ್ಗೆಮುಂಜಾಗ್ರತೆ ಮಾಡುವ ಬಗ್ಗೆ ನಾವು ಒತ್ತಾಯ ಪೂರ್ವಕವಾಗಿ ಹೇಳುವುದಕ್ಕಿಂತ ಸ್ವಯಂ ಪ್ರೇರಿತವಾಗಿ ಎಚ್ಚರವಹಿಸಿದ್ರೆ ಎಲ್ಲರಿಗೂ ಉತ್ತಮ..
![ಪೋನ್-ಇನ್ ಲೈವ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಎಸ್ಪಿ ಶ್ರೀನಿವಾಸ್ ಗೌಡ.. Hassan](https://etvbharatimages.akamaized.net/etvbharat/prod-images/768-512-7987770-771-7987770-1594478052427.jpg)
ಕೊರೊನಾ ವಿಚಾರದಲ್ಲಿ ನಮಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸಮರ್ಪಕ ಚಿಕಿತ್ಸೆ ಕೊಡುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಲಾಗಿದೆ. ಇಂತಹ ಹಲವಾರು ಕರೆಗಳು ಬಂದಿವೆ ಎಂದು ಮಾಹಿತಿ ನೀಡಿದರು.
ಎಲ್ಲಾ ಸಮಸ್ಯೆಗಳ ಬಗ್ಗೆ ಗಮನ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಂಡ ನಂತರ ಕರೆ ಮಾಡಿ ತಿಳಿಸಿದ ಅವರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿವೆ. ಈ ಬಗ್ಗೆಮುಂಜಾಗ್ರತೆ ಮಾಡುವ ಬಗ್ಗೆ ನಾವು ಒತ್ತಾಯ ಪೂರ್ವಕವಾಗಿ ಹೇಳುವುದಕ್ಕಿಂತ ಸ್ವಯಂ ಪ್ರೇರಿತವಾಗಿ ಎಚ್ಚರವಹಿಸಿದ್ರೆ ಎಲ್ಲರಿಗೂ ಉತ್ತಮ, ಸಾಮಾಜಿಕ ಅಂತರ ಹಾಗೂ ತಪ್ಪದೆ ಮಾಸ್ಕ್ ಹಾಕುವುದನ್ನು ಮೈಗೂಡಿಸಿಗೊಳ್ಳುವುದರ ಜೊತೆಗೆ ಇತರರಿಗೂ ಜಾಗೃತಿ ಮೂಡಿಸಿದ್ರೆ ಒಳ್ಳೆಯ ಸಮಾಜ ನಿರ್ಮಿಸಬಹುದಾಗಿದೆ ಎಂದು ಸಲಹೆ ನೀಡಿದರು.