ಹಾಸನ:ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಸಜ್ಜಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ್ ಗೌಡ ಕೆಲವು ಮಾಹಿತಿಗಳನ್ನು ಜಿಲ್ಲೆಯ ಪೊಲೀಸರಿಗೆ ನೀಡುವ ಮೂಲಕ ಖಡಕ್ ಸೂಚನೆ ಕೊಟ್ಟರು.
ಪೊಲೀಸ್ ಕಚೇರಿ ಸಂಕೀರ್ಣ ಭವನದಲ್ಲಿ ನಿನ್ನೆ ಹಾಸನ ನಗರ, ಗ್ರಾಮಾಂತರ ಮತ್ತು ಸಂಚಾರಿ ಪೊಲೀಸರಿಗೆ ವಿಶೇಷ ಸೂಚನೆಗಳನ್ನು ಎಸ್ಪಿ ನೀಡಿದರು. ರಾತ್ರಿ ಹೊತ್ತು ಕೆಲ ಪುಂಡ ಪೋಕರಿಗಳು ಸುಖಾಸುಮ್ಮನೆ ಓಡಾಡುತ್ತಾರೆ. ಅಲ್ಲದೆ, ಮನೆಗಳ್ಳತನ, ಕೊಲೆ ಪ್ರಕರಣ, ಅತ್ಯಾಚಾರ ಪ್ರಕರಣಗಳಂತಹ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ತಮ್ಮ-ತಮ್ಮ ಬೀಟ್ ವ್ಯಾಪ್ತಿಯಲ್ಲಿ ಸಂಚರಿಸುವ ಕೆಲವು ಅನುಮಾನಾಸ್ಪದ ವಾಹನಗಳನ್ನು ಮತ್ತು ವ್ಯಕ್ತಿಗಳನ್ನು ತಪಾಸಣೆ ಮಾಡಿ. ಇದರಿಂದ ಜಿಲ್ಲೆಯಲ್ಲಿ ನಡೆಯುವಂತಹ ಕೃತ್ಯಗಳ ಬಗ್ಗೆ ನಿಮಗೆ ಕೆಲವು ಮಾಹಿತಿಗಳು ಸಿಗಬಹುದು. ಕೆಲವೊಮ್ಮೆ ಮೊಬೈಲ್ ನೆಟ್ವರ್ಕ್ ಸಿಗದೆ ಇರಬಹುದು. ಆದರೆ ನಿಮಗೆ ನಮ್ಮ ಇಲಾಖೆಯಿಂದ ವಾಕಿ-ಟಾಕಿ ನೀಡಲಾಗಿದೆ. ಅದನ್ನು ಪ್ರತಿಯೊಬ್ಬರು ಕೂಡ ತಮ್ಮ ಕರ್ತವ್ಯದ ವೇಳೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಲೇಬೇಕು. ಇದರಿಂದ ಸ್ಥಳದಲ್ಲಿ ನಡೆದ ಕೃತ್ಯ ಅಥವಾ ಇತರೆ ಪ್ರಕರಣಗಳ ಬಗ್ಗೆ ತಕ್ಷಣ ಮಾಹಿತಿ ನೀಡಲು ಸಹಕಾರಿಯಾಗುತ್ತದೆ ಮತ್ತು ನಿಮ್ಮ ಭದ್ರತೆ ದೃಷ್ಟಿಯಿಂದಲೂ ಇದು ಉತ್ತಮ ಎಂದು ಸಲಹೆ ನೀಡಿದರು.
ಇನ್ನು ಪ್ರತಿನಿತ್ಯ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಕೃತ್ಯಗಳು ನಡೆಯಬಹುದಾದ ಸ್ಥಳಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ. ನಾಲ್ಕಕ್ಕಿಂತ ಅಧಿಕ ವ್ಯಕ್ತಿಗಳು ಒಂದೇ ಕಡೆ ಕೂತು ಹರಟೆ ಹೊಡೆಯುವುದು, ಯಾವುದಾದರೂ ಕೃತ್ಯಕ್ಕೆ ಸಂಚು ರೂಪಿಸುತ್ತಿರುವುದು ಕಂಡುಬಂದರೆ ತಕ್ಷಣ ಅಂಥವರನ್ನು ತಮ್ಮ ತಂಡದೊಂದಿಗೆ ತೆರಳಿ ವಿಚಾರಣೆಗೊಳಪಡಿಸಿ. ರಾತ್ರಿ ಹತ್ತು ಗಂಟೆಯ ವೇಳೆ, ಹತ್ತು ಗಂಟೆಯ ನಂತರ ಮಹಿಳೆಯರು ಒಂಟಿಯಾಗಿ ಹೋಗುವ ಸಂದರ್ಭದಲ್ಲಿ ಅವರನ್ನು ವಿಚಾರಿಸಿ ಮತ್ತು ಏನಾದರೂ ಸಹಾಯ ಬೇಕಾದಲ್ಲಿ ಅವರಿಗೆ ಸಹಕರಿಸಿ ಎಂದು ಸೂಚಿಸಿದರು.
ಪೊಲೀಸರಿಗೆ ನೀಡಿದ ಇತರೆ ಸೂಚನೆಗಳು:
*ರಾತ್ರಿ 10:30ರ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ತಿಳಿಸಬೇಕು.