ಹಾಸನ: ವಿಶ್ವವೇ ಬೆಚ್ಚಿಬೀಳಿಸಿರುವ ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ಜಾಗೃತಿ ಮೂಡಿಸಲು ಜಿಲ್ಲೆಯ ಅರಕಲಗೂಡು ಪಟ್ಟಣದ ಯುವಕರಿಬ್ಬರು ಪ್ರಾಸಬದ್ಧವಾದ ಸಾಹಿತ್ಯವನ್ನು ರಚಿಸಿದ್ದಾರೆ. ಅಷ್ಟೇ ಅಲ್ಲದೆ, ಹಾಡಿನ ಮೂಲಕ ಅರಿವು ಮೂಡಿಸಲು ಯತ್ನಿಸಿದ್ದಾರೆ.
ಕೊರೊನಾ ಜಾಗೃತಿ ಮೂಡಿಸಲು ಹಾಡು ಕಟ್ಟಿದ ಯುವಕರು- ವಿಡಿಯೋ ವೈರಲ್ - Song, video viral to raise awareness of Corona
ವಿಶ್ವವವನ್ನೇ ಬೆಚ್ಚಿಬೀಳಿಸಿರುವ ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ಜಾಗೃತಿ ಮೂಡಿಸಲು ಜಿಲ್ಲೆಯ ಅರಕಲಗೂಡು ಪಟ್ಟಣದ ಯುವಕರಿಬ್ಬರು ಪ್ರಾಸಬದ್ಧವಾದ ಸಾಹಿತ್ಯವನ್ನು ರಚಿಸಿ ಹಾಡಿನ ಮೂಲಕ ಅರಿವು ಮೂಡಿಸಲು ಯತ್ನಿಸಿದ್ದಾರೆ.
![ಕೊರೊನಾ ಜಾಗೃತಿ ಮೂಡಿಸಲು ಹಾಡು ಕಟ್ಟಿದ ಯುವಕರು- ವಿಡಿಯೋ ವೈರಲ್ dsdd](https://etvbharatimages.akamaized.net/etvbharat/prod-images/768-512-6463597-thumbnail-3x2-vish.jpg)
ಪಟ್ಟಣದ ದೇವಾನಂದ ಪ್ರಸಾದ್ ಮತ್ತು ಪ್ರದೀಪ್ ಎಂಬ ಇಬ್ಬರು ಗಾಯಕರು ಈ ಹಾಡನ್ನು ಸ್ವಯಂ ರಚಿಸುವ ಮೂಲಕ ಪ್ರಾಸಬದ್ಧವಾಗಿ ಹಾಡಿ ವೈರಸ್ ಹರಡುವ ಬಗೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ವೈರಸ್ ಮಾನವನ ದೇಹಕ್ಕೆ ಹರಡದಂತೆ ಯಾವ ರೀತಿಯ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಹಾಡಿನಲ್ಲಿ ಇಬ್ಬರು ಗಾಯಕರು ತಿಳಿಸಿದ್ದಾರೆ. ಸಮಾಜದ ಒಳಿತಿಗಾಗಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ತಮ ಕೆಲಸ ಮಾಡಿದ್ದಾರೆ. ಇವರ ಈ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇವರ ಹಾಡನ್ನ ಕೇಳಿ ನೋಡಿದ ನೆಟ್ಟಿಗರು, ಸಾಕಷ್ಟು ಸಂದೇಶಗಳನ್ನು ಕಳುಹಿಸುತ್ತಿದ್ದ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ಗೆ ವ್ಯಾಕ್ಸಿನ್ ಕಂಡುಹಿಡಿಯುವ ತಂಡದಲ್ಲಿ ಅರಕಲಗೂಡು ಮೂಲದ ಮಹದೇಶಪ್ರಸಾದ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಇದೇ ಪಟ್ಟಣದ ಇಬ್ಬರೂ ಗಾಯಕರು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.