ಕರ್ನಾಟಕ

karnataka

ETV Bharat / state

ಎರಡನೇ ಮದುವೆ ರಾದ್ಧಾಂತ: ಹಾಸನದಲ್ಲಿ ಮಹಿಳೆ ಜೊತೆ ಯೋಧ ಆತ್ಮಹತ್ಯೆ ಶಂಕೆ - soldier commits suicide with a woman in Hassan

ಮದುವೆ ವೇಳೆ ಗಲಾಟೆ ಮಾಡಿದ್ದರಿಂದ ಮನನೊಂದ ವ್ಯಕ್ತಿಯೊಬ್ಬ ಮಹಿಳೆ ಜೊತೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

soldier commits suicide with a woman in Hassan
ಎರಡನೇ ಮದುವೆ ರಾದ್ಧಾಂತ: ಹಾಸನದಲ್ಲಿ ಮಹಿಳೆ ಜೊತೆ ಯೋಧ ಆತ್ಮಹತ್ಯೆ ಶಂಕೆ

By

Published : Nov 11, 2022, 11:06 PM IST

Updated : Nov 12, 2022, 9:57 AM IST

ಹಾಸನ: ಮದುವೆ ರಾದ್ಧಾಂತದಿಂದ ಮನನೊಂದ ವ್ಯಕ್ತಿಯೊಬ್ಬ ಮಹಿಳೆಯ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ಶಾಂತಿಗ್ರಾಮ ಹೋಬಳಿಯ ಹೊಂಗೆರೆ ಗ್ರಾಮದಲ್ಲಿ ನಡೆದಿದೆ. ವೃತ್ತಿಯಲ್ಲಿ ಯೋಧನಾಗಿದ್ದ ಕಿರಣ್ ಕುಮಾರ್ ಹಾಗೂ ಆಶಾ ಮೃತ ದುರ್ದೈವಿಗಳು.

ಗಂಡನನ್ನು ಕಳೆದುಕೊಂಡ ಆಶಾಳ ಜೊತೆ ಕಳೆದ ಎರಡು ವರ್ಷಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದ ಕಿರಣ್, ಪೋಷಕರ ಮಾತಿಗೆ ಒಪ್ಪಿ ಮದುವೆಯಾಗಿದ್ದ ಎನ್ನಲಾಗಿದೆ. ಆದರೆ, ಕೆಲವು ಕಾರಣಗಳನ್ನು ನೀಡಿ ಆಶಾ ಮದುವೆಯನ್ನು ಮುರಿದು ಹಾಕಿದ್ದರು.

ಗುರುವಾರ ಕಿರಣ್ ಕುಮಾರ್ ಎರಡನೇ ಮದುವೆ ಸುದ್ದಿ ತಿಳಿಯುತ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ಬಂದ ಆಶಾ ಈತನ ಜೊತೆ ಜಗಳ ತೆಗೆದಿದ್ದರು ಎನ್ನಲಾಗಿದೆ. ಇದರಿಂದ ಹುಡುಗಿ ಮನೆಯವರು ಮದುವೆಯನ್ನು ನಿಲ್ಲಿಸಿದ್ದರು. ಈ ವೇಳೆ ಮೊದಲನೇ ಹೆಂಡತಿಯೊಂದಿಗೆ ಇರುವಂತೆ ಯುವತಿ ಮತ್ತು ಮನೆಯವರು ಅವರಿಬ್ಬರನ್ನೂ ಕಳುಹಿಸಿಕೊಟ್ಟಿದ್ದರು.

ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನವಾದ ಬಳಿಕ ಯೋಧ ಕಿರಣ್ ಕುಮಾರ್​ ಮತ್ತು ಆಶಾ ಹೊಂಗೆರೆ ಅರಣ್ಯದ ಬಳಿ ತೆರಳಿದ್ದರು. ಬಳಿಕ ಇಬ್ಬರ ಮೃತದೇಹವೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿನ್ನೆ ನಡೆದ ಗಲಾಟೆಯಿಂದ ಹಾಗೂ ಮರ್ಯಾದೆಗೆ ಅಂಜಿದ ಕಿರಣ್ ಮೊದಲ ಪತ್ನಿ ಆಶಾ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಎರಡನೇ ಮದುವೆಯಾಗಿದ್ದ ಎಂಬ ಸುದ್ದಿ ಹರಡುತ್ತಲೇ ಯೋಧ ಕಿರಣ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಬ್ಬರಿಗೂ ಮೋಸ ಮಾಡಿದೆ ಎಂಬ ನೋವು ಮತ್ತು ಹತಾಶೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ವಿಧವೆಗೆ ಬಾಳಿಕೊಟ್ಟು ಆಶಾಕಿರಣವಾಗಿದ್ದ ಕಿರಣ್ ಈಗ ಮೊದಲ ಪತ್ನಿಯ ಮಕ್ಕಳಿಬ್ಬರನ್ನೂ ಅನಾಥರನ್ನಾಗಿ ಮಾಡಿದ್ದಾರೆ.

Last Updated : Nov 12, 2022, 9:57 AM IST

ABOUT THE AUTHOR

...view details